ಕಲಿಯಬೇಕಿದೆ.....
ನಾನು ಕಲಿಯಬೇಕಿದೆ ..ಇಂಥವರ ನಡುವೆ
ಬೆಳೆಯಲು ಬೆಳಗಲು
ಮುಂದೆ ನಗುತ್ತಲೇ ಇರುವುದು
ಉಫ್ಫ್ ಎಂದು ಉಸಿರುಬಿಡುವುದು
ನಾನು ಕಲಿಯಬೇಕಿದೆ
ಗೊತ್ತಿಲ್ಲದ್ದನ್ನು ಗೊತ್ತಿದೆ ..
ಎಲ್ಲಾ ನನಗೇ ಗೊತ್ತಿದೆ
ಮತ್ತೆ ನನಗಲ್ಲದೆ ಇದು ಯಾರಿಗೂ ಗೊತ್ತಿರಲು
ಸಾಧ್ಯವೇ ಇಲ್ಲ ಎಂದು ವಾದಿಸುವ ಕಲೆಯನ್ನ....
ಕಲಿಯಬೇಕಿದೆ
ಸುಳ್ಳು ಗಳ ಮೂಟೆಯಲ್ಲಿ ಸತ್ಯ ಹುಡುಕುವ
ವ್ಯರ್ಥ ಪ್ರಯತ್ನ ಮಾಡುವುದನ್ನ
ಮಿಥ್ಯೆ ಕನ್ನಡಿ ಮನೆಯಲ್ಲಿ ಸತ್ಯ ತೋರಲು ಒದ್ದಾಡಿ
ಇಲ್ಲದ್ದನ್ನು ಇದೆ ಎಂದು ತೋರುವ ವಿದ್ಯೆ ಯನ್ನ
ಕಲಿಯಬೇಕಿದೆ
ಏಳಿಗೆ ಆದರೆ ಅದು ನನ್ನದೇ ಆಗಿರಬೇಕು
ಜಗದಲ್ಲಿ ನನ್ನ ಹೊರತು ಏಳಿಗೆ ಗೆ ಅರ್ಹರ್ಯಾರು ?
ಎಂದು ಬೀಗುವುದನ್ನ...
ರೋಗವನ್ನು ಆರೊಗ್ಯ ಎನ್ನುವುದನ್ನ
ಕಾಗೆ ಬಂಗಾರವನ್ನು ಚಿನ್ನ ಎನ್ನುವುದನ್ನ
ಮತ್ಯಾರಿಗಾದರು ಸಿಕ್ಕೀತು .ಎನ್ನುವ ಹಪ ಹಪಿಯಲ್ಲಿ
ಹಳಸಿದ್ದನ್ನು ಉಣ್ಣುವ ತೆವಲನ್ನ
ಕಲಿಯಬೇಕಿದೆ,
ದುರ್ಗಂಧವನ್ನು ಸೌಗಂಧಿಕೆ ಎನ್ನುವ
ಅನಿವಾರ್ಯತೆಯನ್ನ
ನೀನೆ ನೀನೆ ನೀನೆ ಎಂಬ ಹೊಗಳಿಕೆಯಾ ನುಡಿಯನ್ನ
ಕಲಿಯಬೇಕಿದೆ
ಬೆಳೆಯಲು- ಬೆಳಗಲು ...
ಆದರೆ ಇಷೆಲ್ಲ ಕಲಿತ ದಿನ ನಾ
ಬೆಳೆಯುವೆನೆ?? ಬೆಳಗುವೆನೆ?
ಕೊನೆಗೆ ನನ್ನ ನಾನು
ಗುರುತಿಸ ಬಲ್ಲೆನೇ???
ಬಿಡು ಹೀಗೆ ಇದ್ದು ಬಿಡುವೆ..
ಪೆದ್ದು ಪೆದ್ದಾಗಿ ,
ಕೊನೆಯ ನಿಟ್ಟುಸಿರು ನಿಮ್ಮ ಒಳ್ಳೆಯ ತನದ ಧ್ಯೋತಕ.
ReplyDeleteಆದರೆ, ಜಗವನ್ನೇ ಯಾಮಾರಿಸುವ ಜಗತ್ ಜಂತ್ರಿಗಳ ನಡುವೆ ನಾವು ಗೆಲ್ಲಬೇಕಾದರೆ ಇನ್ನಾದರೂ ಕಲಿಯಬೇಕಿದೆ!
wow u write very nice liked it a lot inthaha kavithegalannu odi naanu bahala kaliyabekide
ReplyDeleteಕಲಿಯಬೇಕಿದೆ
ReplyDeleteಬೆಳೆಯಲು- ಬೆಳಗಲು ...
ಆದರೆ ಇಷೆಲ್ಲ ಕಲಿತ ದಿನ ನಾ
ಬೆಳೆಯುವೆನೆ?? ಬೆಳಗುವೆನೆ?
ಕೊನೆಗೆ ನನ್ನ ನಾನು
ಗುರುತಿಸ ಬಲ್ಲೆನೇ???
ಬಿಡು ಹೀಗೆ ಇದ್ದು ಬಿಡುವೆ..
ಪೆದ್ದು ಪೆದ್ದಾಗಿ ,
:::
ತುಂಬಾ ಇಷ್ಟವಾಯಿತು...