ಪ್ರತಿ ಹೃದಯದಲ್ಲೊಂದು ಪುಟ್ಟ ಕೊಣೆ ,
ಅದೊಂದು ಧಾಮ ಸುಬಧ್ರ ಸಶಕ್ತ
ಭಗ್ನ ಪ್ರೇಮದಿಂದ ಘಾಸಿಗೊಂಡ
ಹೃದಯಕ್ಕೊಂದಿಷ್ಟು ನೆಮ್ಮದಿ ಕೊಡಲು ,
ಕನಿಷ್ಠ ಪಕ್ಷ ಮತ್ತೊಬ್ಬರು ಆ ಸ್ಥಾನ ತುಂಬುವ ತನಕ
ಪ್ರತಿಬಾರಿ ನಿನ್ನೊಂದಿಗೆ ಮಾತಾಡಿದೆ
ಹಲವು ಸ್ಥಾಯಿಗಳಲಿ ನಿನ್ನ ಮೆಚ್ಚಿಸಲು ಯತ್ನಿಸಿದೆ ,
ನೀನು ನಟನೆ ಇಲ್ಲದೆಯೇ ಉತ್ತರಿಸಿದೆ ,
ನಾ ತುಂಬಾ ಮಾತನಾಡುತ್ತೇನೆ ಎಂದೆ ,
ಆದರೆ ನಾ ವಹಿಸಿದ ಮೌನ
ನನ್ನ ಸ್ವ-ರಕ್ಷಣೆಯ ತಂತ್ರ ಎಂದು
ನೀ ತಿಳಿಯದೆ ಹೋದೆ
ಪ್ರತಿಬಾರಿ ಗುಲಾಬಿಯನ್ನು ತಂದೆ ,
ಪ್ರತಿಬಾರಿ ನನ್ನ ಗುಲಾಬಿಯೇ ಎಸೆಯಲ್ಪಟ್ಟಿದ್ದೇಕೆ ?
ಮತ್ತಿದು ಹೀಗೆ ನಡೆಯುತ್ತದೆ ಎಂದು ಗೊತ್ತಿದ್ದೂ ನಾನಿನ್ನ ಪ್ರೀತಿಸುತ್ತಿರುವುದಾದ್ರು ಏಕೆ ??
ಕೆಲವೊಮ್ಮೆ ಅನಿಸಿದ್ದು ಉಂಟು ,
ನನ್ನ ಮೌನ ವೆ ಎಲ್ಲಕ್ಕೂ ಕಾರಣವೇನೋ ಎಂದು ,
ಅದಕ್ಕೆ ನನ್ನ ಹೃದಯದ ಆ ಪುಟ್ಟ ಕೋಣೆಯನ್ನು
ನಿನ್ನೊಂದಿಗೆ ಹಂಚಿಕೊಳ್ಳುತ್ತಿರುವೆ ,
ಇದನ್ನು ಚೂರು ಮಾಡುವ ಸಂಪೂರ್ಣ ಹಕ್ಕು ನಿನ್ನದೇ .
ಈಗ ನನ್ನ ಕಣ್ಣುಗಳು ಸುಮ್ಮನೆ ಮುಚ್ಚಿಕೊಂಡಿವೆ
ಅವು ನೋಡುವುದು ನೀ ನೋಡಿದ್ದನ್ನು , ನೀ ತೋರಿಸಿದ್ದನ್ನು
ಮತ್ತಿದು ಹೀಗೆ ನಡೆಯುತ್ತದೆ ...ನಡೆಯುತ್ತಲೇ ಇರುತ್ತದೆ ....
ನನ್ನ ಆಯ್ಕೆ ಮಾತ್ರ ನೀನೇ
ನಿನಗೂ ಕೊಟ್ಟಿದ್ದೇನೆ ನಿರ್ಧರಿಸುವ ಹಕ್ಕು
ನನ್ನ ಆಯ್ಕೆ ಮಾತ್ರ ನೀನೆ....
ಮತ್ತೆ ನೀ ಮತ್ತು ನನ್ನ ಹೃದಯ
ಚೂರು ಚೂರು ಮಾಡಿ ಅದರ ಮೇಲೇ
ನಡೆದು ಮತ್ತೊಬ್ಬನ ತಕ್ಕೆ ಸೇರಲು..
ಮತ್ತಿದು ಹೀಗೆ ನಡೆಯುತ್ತದೆ ,
ಹೃದಯದ ಮೂಲೆಯಲ್ಲೊಂದು ಕೋಣೆ ಇದೆ ..
ಮತ್ತಿದು ಹೀಗೆ ನಡೆಯುತ್ತದೆ
(ಇಂಗ್ಲಿಶ್ ಹಾಡೊಂದರ ಭಾವಾನುವಾದ )