ನಿನ್ನ ಜೊತೆ ಇಲ್ಲದೆ ಮನ ವಿಭ್ರಾಂತ....
ಸುಮ್ಮನೆ ಗುನುಗಿಕೊಳ್ಳುತ್ತಾ..ಹೊಸ್ತಿಲ ಮೇಲೆ ನಿಂತಿದ್ದೆ...ತುಳಸಿ ಕಟ್ಟೆಯ ಮೇಲೆ ಹಚ್ಚಿದ ದೀಪ.ಗಾಳಿಯೊಂದಿಗೆ ''ನಾನೂ ಸರಸಿ ನೀನು ಅರಸ,,'' ಎಂದು ಹಾಡಿಕೊಳ್ಳುತ್ತಿರಬಹುದ???ಅನ್ನೋ ಯೋಚನೆ...ಮನೆಯೊಳಗೇ ಗವ್ವೆನ್ನುವ ಮೌನ...ಹೊರಗೆ ...ಗಾಳಿಯ ಸದ್ದಾದರೂ ಇದೆಯಲ್ಲ....ಹೆಚ್ಹು ಹೊತ್ತು ಹೊಸ್ತಿಲ ಮೇಲೆ ಹೆಣ್ಣುಮಕ್ಕಳು ನಿಲ್ಲುವಂತಿಲ್ಲ..ಮುಸ್ಸಂಜೆಯಲ್ಲಿ....ಹಾಗೆಂದು ಅಜ್ಜಿ ಹೇಳಿದ್ದು...ನಡುಮನೆಯ ಗೋಡೆಗಡಿಯಾರ ೧೨ ಹೊಡೆದಾಗ ಬಡಿದುಕೊಳ್ಳುವಂತೆ ನನ್ ಮನಸಲ್ಲೂ ಸದ್ದು....
ಒಳಗೆ ಬಂದೆ...ಮುಸ್ಸಂಜೆ ಸಮಯ ಕದವನ್ನು ಹಾಕುವಂತಿಲ್ಲ...ಲಕ್ಸ್ಖ್ಮಿ ಒಳಬರುವ ಹೊತ್ತು...
''ಯಾಕೆ ಅಲ್ಲೇ ನಿಂತಿದ್ದಿ ಒಳಬಂದು ನನ್ನೊಂದಿಗಾದ್ರು ಮಾತಾಡಬಾರದ'''???
ಯಾರು??ಯಾರದು,,??
''ನಾನು ಮೊಂಬತ್ತಿ..''
ನನ್ನ ಏಕಾಂತ ನೋಡಿ ಅದಕ್ಕೂ ಕಿರಿ ಕಿರಿ ಆಗಿರಬೇಕು...''ನಿನ್ನೊಂದಿಗೇನು ಮಾತು??''ಅನ್ನುವ ಧಿಮಾಕು ನನ್ನದು...
''ನಿನ್ನ ಒಳದಳಲ ನಾನಲ್ಲದೇ ಇನ್ಯಾರು ತಿಳಿದಾರು ಹುಡುಗಿ ಬಾ ನಿನಗೆ ಸಮಾಧಾನ ಹೇಳುವೆ..''
''ನಿನ್ನ ಹತ್ತಿರ ಏನು ಹಂಚಿ ಕೊಳ್ಳಲಿ..??ಇನ್ನೆರಡು ಘಂಟೆ ಅಷ್ಟೇ ನಿನ್ನ ಆಯಸ್ಸು ..ನಂತರ ಮತ್ತೆ ನಾನೊಬ್ಬಳೆ ನನ್ನ ಏಕಾಂತದೊಡನೆ...''
''ನಿನೋಬ್ಬಳೆ???ನಿನ್ನ ಏಕಾಂತದೊಂದಿಗೆ??ಏಕಾಂತದೊಡನೆ ಸಖ್ಯ ಎಲ್ಲರಿಗು ಸಾಧ್ಯವಾಗದು ಹುಡುಗಿ.ಏಕಾಂತ ನಿನ್ನೊಂದಿಗೆ ಇರುವಾಗ ನೀ ಹೇಗೆ ಒಬ್ಬಳೇ ಆದಿಯ??ನಿನ್ನೊಂದಿಗೆ ನಿನ್ನ ದಿವ್ಯ ಏಕಾಂತವಿದೆ...''
ಆದರೆ ಅದಕ್ಕೆ ಜೀವವಿಲ್ಲ..ಅದು ನನ್ನೊಡನೆ ಮಾತಾಡುವುದಿಲ್ಲ...ನನಗೇ ಮಾತಾಡಬೇಕು..ಮೌನದ ಸಿಂಪಿಯಿಂದ ಮಾತೆಂಬ ಮುತ್ತುಗಳನ್ನು ಚಲ್ಲಬೇಕು..ಅದನ್ನಾರಿಸುವ ಒಬ್ಬ ಸಂಗಾತಿ ಬೇಕು..ಅದನ್ನು ಸುರಿದು..ಪೋಣಿಸುವ ಜೊತೆಗಾರ ಬೇಕು...ನಿನ್ನ ಏಕಾಂತಕ್ಕಿದು ಸಾಧ್ಯವೇ??
''ಸಾಧ್ಯ...ಆದರೆ ಏಕಾಂತದ ದಿವ್ಯ ಮೌನದ ಮಧುರ ನಾದವನ್ನು ಆಲಿಸಲು ನಿನಗೆ ಸಾಧ್ಯವೇ ಹುಡುಗಿ??''
ಮೌನದ ನಾದ??ಅದು ಮೌನ ಅದನ್ನಾಲಿಸುವುದು ಹೇಗೆ ??
ಮೊಂಬತ್ತಿಯ ಮೌನ .....
ಯಾಕೆ ಮೌನ...ಏನಾದ್ರು ಮಾತಾಡು... ಈಗಾದ್ರು ಸಮಾಧಾನ ಎಂದೆ. ಮತ್ತೆ ಮಾತಾಡದೆ..ಸುಮ್ಮನ್ನಿದ್ದಿ...ನೋಡು ಹೇಳಬೇಕಾದ್ದನ್ನು ಹೇಳಿಬಿಡು...ನಿನ್ನರ್ಧ ಜೀವ ಕರಗಿ ಹೋಗಿದೆ...ನೀ ಪೂರ್ತಿ ಮುಗಿದು ಹೋಗುವ ಮುನ್ನ ನನ್ನ ಮತ್ತು ಈ ಏಕಾಂತದ ಸಖ್ಯ ಮಾಡಿಸಿ ಹೋಗು...ಕೇಳುತ್ತಿರುವೆಯ????ಏ ಮೊಂಬತ್ತಿ...
ಹ್ಮ್ಮ್ಮ್...ಕೇಳಿಸಿಕೊಂಡೆ...ನೋಡು ನನ್ನ ಮೌನವನ್ನ ನೀನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು..???
ಹಾಗೆಂದರೆ ಏನರ್ಥ...??
ಕತ್ತಲೆ..ಮತ್ತು ಬೆಳಕಿಗಿರುವುದು ನಿನ್ನ ಕಣ್ಣು ರೆಪ್ಪೆಯ ಅಂತರ..ಅಷ್ಟೇ...ರೆಪ್ಪೆ ಮುಚ್ಚಿತ್ತಿದ್ದಿ ಅಂದರೆ..ಜಗವೆಲ್ಲ ಜಗಮಗಿಸುತ್ತಿದ್ದರು..ನಿನ್ನ ಕಣ್ಣಲ್ಲಿ ಬರಿ ಕತ್ತಲೆ....ರೆಪ್ಪೆ ತೆರೆದರೆ ಮತ್ತೆ ನೀ ಆ ಬೆಳಕಿಗೆ..
ಬೆಳಕೆಂದರೆ ಬರಿ ಕಣ್ಣಿಗೆ ಕಾಣುವ ಬೆಳಕಲ್ಲ...ನಿನ್ನಾತ್ಮದ ಬೆಳಕು...ಕೇಳು ಹುಡುಗಿ ನಿನ್ನೊಳಗಿನ ಆ ದಿವ್ಯ ಏಕಾಂತದ ಬೆಳಕು...ಅದನ್ನು ಹುಡುಕು...ಆ ಏಕಾಂತದೊಡನೆ ಮಾತಾಡು..ಅಲ್ಲಿ ಪ್ರಶ್ನೆಯು ನೀನೆ ಉತ್ತರವೂ ನೀನೆ...ಮತ್ತೇಕೆ ಸಂಗಾತಿಯ ಹಂಬಲ...????
ನಿನ್ನೊಳಗಿನ ನೀನು ನಿನಗೆ ಸಿಗುವತನಕ...ಈ ಸಂಜೆಗಳ ಇಳಿಗತ್ತಲೆಯು ನಿನ್ನ ಪಾಲಿನ ಬೆಳದಿಂಗಳಗುವತನಕ.....ಮ...ತ್ತೆ.......
ಕಣ್ಣು ಮುಚ್ಚಿ ಮೋಂಬತ್ತಿಯ ಮಾತನ್ನು ಆಲಿಸುತ್ತಿದ್ದ ನನಗೇ..ಮತ್ತೆ ಏಕಾಂತ..ಕಣ್ಣು ತೆರೆದರೆ ಕತ್ತಲೆ...ಬತ್ತಿ ಆರಿಹೋದ ವಾಸನೆ....ಮತ್ತೆ ನಾ ಕೊರಗಲಿಲ್ಲ...ಮೊಂಬತ್ತಿ ನನ್ನ ಬಿಟ್ಟು ಹೋಗಿದ್ದಕ್ಕೆ...ನನ್ನೊಳಗಿನ ನಾನು ನನಗೇ ಸಿಗುವ ತನಕ....
ಈಗ...ಕುವೆಂಪು ಬರೆದ ಗೀತೆ...ನನ್ನ ಏಕಾಂತವನ್ನಳುತ್ತಿತ್ತು..
ಅಂತರತಮ ನೀ ಗುರು ..ನೀ ಆತ್ಮ ತಮೋಹಾರಿ ....
ಹೀಗಿತ್ತು ಮೊಂಬತ್ತಿ ಒಡನೊಂದು ಏಕಾಂತದ ಸಂಜೆ...