Monday, August 29, 2011

ಜನರ ಸಂತೆಯಲ್ಲಿ ಹಕ್ಕಿಗಳೊಂದಿಗೆ... ನಾನು


                                                                                               


ಇಂಥವೆಲ್ಲ ನನ್ನ ಕಣ್ಣಿಗೆ ಯಾಕೆ ಬಿಳುತ್ತವೆಯೋ ಗೊತ್ತಿಲ್ಲ, ದೇಶ ಬಿಟ್ಟು ನನ್ನದಲ್ಲದ ನಾಡಿಗೆ ಬಂದು ನೆಲೆಸಿದರು ಈ ನಂಟು ನನ್ನ ಬಿಡಲೊಲ್ಲದು, ಮದುವೆಯ ನಂತರ ಮೊದಲು ಸಂಸಾರದ ಬಂಡಿ ಹೂಡಿದ್ದು ಬೆಳಗಾವಿಯಲ್ಲಿ, ೨ ನೇ ಅಂತಸ್ತಿನಲ್ಲಿ ನನ್ನ ಪುಟ್ಟ ಗೂಡು , ಅಡಿಗೆ ಮನೆಯ ಕಿಟಕಿ ತೆರೆದ ಕೂಡಲೇ ಕಾಣುತ್ತಿತ್ತು ಅವರ ಬಳಗ. ಹತ್ತಿರದ ಅಂಗಡಿಯ ಬಾಗಿಲಲ್ಲಿ ಅವರು ಎಸೆಯುತ್ತಿದ್ದ ಅಕ್ಕಿಯ ಕಾಳ್ ಆಸೆ ಪಟ್ಟು ಎದುರಿನ ವಿದ್ಯುತ್ ತಂತಿಯ ಮೇಲೆ ಮದುವೆ ಉಟಕ್ಕೆ ಕುಳಿತ ಪಂಕ್ತಿಯಂತೆ ಕೂಡುತ್ತಿದ್ದ ಮುದ್ದು ಮುಖದ ಗುಬ್ಬಿಗಳು.

ನನ್ನ ಕೆಲಸ ಮುಗಿಯಿತೆಂದ ಕೂಡಲೇ, ನಾನು ಅವನ್ನು ನೋಡುತ್ತಾ ಕುಳಿತು ಬಿಡುತ್ತಿದ್ದೆ. ನೋಡಲು ಒಂದೇ ರೀತಿ ಕಂಡರೂ ಅವುಗಳ ಆಕಾರ, ಗಾತ್ರ,ಅವುಗಳ ಚರ್ಯೆ ಬೇರೆಯೇ ಆಗಿರುತ್ತದೆ. ಹತ್ತಿರದಿಂದ ನೋಡಲು ಸಿಗುತ್ತಿದ್ದರಿಂದ ನಾನು ಅವನ್ನು ಗುರುತಿಸ ತೊಡಗಿದ್ದೆ. ಹಾಗೊಂದ್ ದಿನ ನಾನೂ ಕಿಟಕಿಯ ಹೊರಗಿನ ಪುಟ್ಟ ಜಾಗೆಯಲ್ಲೇ ಒಂದಷ್ಟು ಅಕ್ಕಿ ನುಚ್ಚು ಎಸೆದು ಅವಕ್ಕಾಗಿ ಕಾಯುತ್ತ ಕುಳಿತೆ..ಹಾಗೆ ಬಂದೇ ಬಿಡುತ್ತವೆಯೇ ಅವು..?????ಕಾಯಿಸಿದವು..ನಾನೂ ಕಾದೆ ೧..೨..೩...೪...ಹೀಗೆ ದಿನ ಕಳೆದರು ಅವು ಬರಲಿಲ್ಲ. ಅದೊಂದು ದಿನ ಪುಟ್ಟ ಮರಿ ಗುಬ್ಬಿ ನನ್ನ ಕಿಟಕಿಯ ಮೇಲೆಸೆದ  ನುಚ್ಚಿನ ರುಚಿ ನೋಡಲು ಬಂದಿತ್ತು.

ಮೊದಲು ಅದಕ್ಕೂ ಹೆದರಿಕೆ! ಆಮೇಲೆ ಅದು ತನ್ನ ಪರಿವಾರದೊಂದಿಗೆ ಬರ ತೊಡಗಿತು. ಆಮೇಲೆ ದಿನಾಲೂ . ಸಂಖ್ಯೆ ಹೆಚ್ಹಾಗ ತೊಡಗಿದಂತೆ ಒಮ್ಮೆ ಹಾಕಿದರೆ ಸಾಕಾಗದು ಮತ್ತೆ ಮತ್ತೆ ಹಾಕು ಎಂಬಂತೆ ಜಗಳವಾಡುತ್ತಿದ್ದವು. ಅವುಗಳೊಂದಿಗೆ ಒಂದು ಘಟ್ಟಿ ಬಾಂಧವ್ಯ ಬೆಳೆಯತೊಡಗಿತ್ತು. ಇಲ್ಲಿ ಮಾತಾಡಿ ಹಾಳಾಗುವ,ಮಾತಿನ ಇನ್ನೊಂದು ಅರ್ಥ ಹುಡುಕುವ ಪ್ರಮೇಯ ಇರಲಿಲ್ಲ..ಚೀಕ್ ಚಿಕ್ ..ಚೆಂವ್ವ್...ಎಂಬುದನ್ನು ನಾನೂ ನನಗೆ ಬೇಕಾದಂತೆ ಅರ್ಥೈಸ ತೊಡಗಿದ್ದೆ..ಅವುಗಳೊಂದಿಗೆ ಮಾತಾಡುತ್ತಿದ್ದೆ. ಜಗಳ ಮಾಡುತ್ತಿದ್ದೆ   ವಿಚಿತ್ರ ಎಂದರೆ ಅವು ನನ್ನ ಮಾತಿಗೆ ಪ್ರತಿಕ್ರಿಯಿಸುತ್ತಿದ್ದವು ಇದನೆಲ್ಲಾ ನನ್ನ ಪಪ್ಪನಿಗೆ ಫೋನ್ ಮಾಡಿ ಸಂತಸ ಪಡುತ್ತಿದ್ದೆ..ಭಾವುಕ ಜೀವಿಗೆ ಇದೊಂದು ಅಪೂರ್ವ ಅನುಭವ. ವಾಸ್ತವ ವಾದಿ ನನ್ನ ಪತಿ ಕೂಡ ಇದನ್ನು ಆನಂದಿಸ  ತೊಡಗಿದ್ದರು.ಆದಿನ ಕಿಟಕಿಯ ಬಾಗಿಲು ತೆರೆದಿತ್ತು ನಾವು ನಮ್ಮ ಕೋಣೆಯಲ್ಲಿದ್ದೆವು, ಏನೋ ಸದ್ದು ಎರಡು ಗುಬ್ಬಿಗಳು!!!ಸೀದಾ ಒಳಬಂದು ಹಾರಡ ತೊಡಗಿದ್ದವು..ಆದಿನ ನಾ ಅನುಭವಿಸಿದ್ದ ಆ ಸಂತಸ ಅದೆಷ್ಟು ಮಧುರ...

ಅದೆಷ್ಟು ಬೇಗ ಸಮಯ ಸರಿಯಿತು ತಿಳಿಯಲೇ ಇಲ್ಲ. ನಾನೂ‌ ಬಾಣಂತನಕ್ಕೆ ಅಮ್ಮನ ಮನೆಗೆ ಹೊರಟು ನಿಂತೆ. ಅವಕ್ಕೂ ಟಾಟ ಹೇಳಿದ್ದೆ. ಆಮೇಲೆ ನಾ ಬಂದಿದ್ದು ೭ ತಿಂಗಳ ನಂತರ. ಅಲ್ಲಿ ತನಕ ಸ್ಥಗಿತ ವಾಗಿದ್ದ, ನಮ್ಮ ಮಾತುಕತೆ ಮತ್ತೆ ಪ್ರಾರಂಭವಾಗಿತ್ತು .
ನಮಗೂ ಗೊತ್ತಾಗದಷ್ಟು ವೇಗದಲ್ಲಿ ನಮ್ಮ ನೆಲೆ ಬದಲಿಸಬೇಕಾಗಿ ಬಂತು.‌ಮತ್ತೆ ಅವುಗಳಿಂದ ದೂರವಾಗಿದ್ದೆ. ಅಷ್ಟೊತ್ತಿಗಾಗಲೇ ಗುಬ್ಬಿಗಳೊಂದಿಗೆ ಕಾಡು ಪಾರಿವಾಳಗಳು ಜೊತೆಯಾಗಿದ್ದವು...ಅವುಗಳನ್ನು ಬಿಟ್ಟು ಬರುವಾಗ ಆದ ಸಂಕಟ ಯಾರೊಂದಿಗೂ ನಾ ಹಂಚಿ ಕೊಳ್ಳಲಿಲ್ಲ  ಹೇಳಲು ಏನಿತ್ತು???..ಸಾಕಿದ ಹಕ್ಕಿಗಳಲ್ಲ ನನ್ನ ನಂಬೇ ಬಂದವುಗಳಲ್ಲ ಆದರೂ ನನ್ನ ಏಕತಾನತೆಗೆ ಸಂಗಾತಿ ಯಾಗಿ ಒಲುಮೆಯ ಬಾಂಧವ್ಯ ಬೆಸೆದಿದ್ದವು. ಮಾತು ಬರುವ ಮನುಷ್ಯರಿಗಿಂತ ಮಾತು ಬರದ ಈ ಜೀವಿಗಳೇ ಸಾವಿರಪಾಲು ಲೇಸು ಎನಿಸಿದ್ದು ಸುಳ್ಳಲ್ಲ..

ನಂತರ ಮತ್ತೊಂದು ಹಕ್ಕಿಯ ಜೊತೆ ಒಡನಾಟ ಆಯ್ತು. ಆ ಹಕ್ಕಿಯ  ಹೆಸರು ನನಗೆ ಗೊತ್ತಿಲ್ಲ. ಕನ್ನಡಿಯಲ್ಲಿ ತನ್ನ ಬಿಂಬ ಕಂಡು ಅದನ್ನು ಕುಕ್ಕುತ್ತ ಕುಳಿತು ಕೊಳ್ಳುತಿತ್ತು.ಮನೆಯ ಜಗಲಿಯಲ್ಲಿ ನೇತು ಹಾಕಿದ ಒಂದು ಪ್ರಕೃತಿಯ         ಚಿತ್ರಕ್ಕೆ ಬಂದು ಏನೋ ಹುಡುಕುತಿತ್ತು...ಅದೇ ಹಕ್ಕಿ..ಗೊರಟ್ಟಿಗೆ ಗಿಡಕ್ಕೆ ಗೂಡು ಕಟ್ಟಿ ಸಂಸಾರ ಹೂಡಿತ್ತು(..ಅದರ ಕುರಿತು ಬರೆದ ಬರಹ http://bhavanaloka.blogspot.com/2010/12/blog-post_9354.ಹ್ತ್ಮ್ಲ್ ಇಲ್ಲಿ ಓದಬಹುದು..)

ನಂತರ ಈ ನಾಡಿನಲ್ಲಿ(Northern Ireland)
ನಾ ಬಂದ ದಿನದಿಂದಲೇ ಇಲ್ಲಿ ಸ್ನೌಫಾಲ್  ಮೆತ್ತಗೆ ಆರಂಭ ಗೊಂಡಿತ್ತು‌ ಆಗೆಲ್ಲ ಹಾರಾಡುತ್ತಿದ್ದ ಹಕ್ಕಿ ಕಂಡು ಅಂದು ಕೊಳ್ಳುತ್ತಿದ್ದೆ ಅದೆಷ್ಟು ಛಳಿ ಆಗುತ್ತಿರಬಹುದು ಇವಕ್ಕೆ..????ಈ ಸಮಯದಲ್ಲೇ ಅಲ್ಲವೇ ಅವು ಸಾವಿರಾರು ಮೈಲಿ..ವಲಸೆ ಹೋಗುವುದು..ನನ್ನೂರ ಹತ್ತಿರ ಇರುವ ಅತ್ತಿವೆರಿ  ಪಕ್ಷಿ ಧಾಮಕ್ಕೆ ಬಂದು ಗೂಡು ಕಟ್ಟಿ ಸಂಸಾರ ಮಾಡಿದ ಹಕ್ಕಿಗಳು ಇಲ್ಲೂ ಇರಬಹುದ????ಹಾಗೆ ಏನೇನೋ ಆಲೋಚನೆಗಳು.ಮತ್ತು ಇಲ್ಲಿ ಯಾವ ಪಕ್ಷಿಯೊಂದಿಗೆ ನನ್ನ ಬಂಧ ಬೆಳೆಯಲಿದೆಯೋ????ಮನಸ್ಸು ಯಾವಾಗಲಾದರೊಮ್ಮೆ ಕೇಳಿದ್ದು ಸುಳ್ಳಲ್ಲ...

ಹಾಗೆ ಕೇಳಿಕೊಂಡ ಕೊಂಚ ದಿನಕ್ಕೆ ಹಿತ್ತಲಲ್ಲಿ ಪಕ್ಷಿಗಳ ಇಂಚರ..ಆದರೂ ನಾ ಗಮನಿಸಲಿಲ್ಲ..ಗೂಡು ಕಟ್ಟಲು ಮರವು ಇಲ್ಲ‌ ಮತ್ಯಾವ ರೀತಿಯಲ್ಲೂ ಸೂಕ್ತವಲ್ಲದ ಯಮಗಾತ್ರದ  ಸಿಮೆಂಟು ಗೋಡೆಗಳು, ಅಲ್ಲಿ ಹೇಗೆ ಗೂಡು ಕಟ್ಟಿಯಾವು????
ನನ್ನ ಸಂದೇಹ ಮರುದಿನವೇ ಮಾಯಾ. ಅಲ್ಲೊಂದು ಗೂಡು ಅದೂ ಮಣ್ಣಿನ ಗೂಡು. ಹಕ್ಕಿಗಳು ಮಣ್ಣಿನಿಂದ ಗೂಡು ಕಟ್ಟುತ್ತವೆಯೇ????ನಾನು ಹಕ್ಕಿಗಳ ಬಗ್ಗೆ ಅಷ್ಟೇನೂ ಓದಿಕೊಂಡಿಲ್ಲ ಆಗ ಆ ಗೂಡ್ನಲ್ಲಿ ಪುಟ್ಟ ಪುಟ್ಟ ನಾಲ್ಕು ಮರಿಗಳು..ತುಂಬಾ ಆಯಕಟ್ಟಿನ ಸ್ಥಳದಲ್ಲಿ ಗೂಡು ಇದ್ದಿದ್ದ ರಿಂದ ಮರಿಗಳ ಫೋಟೋ ತೆಗೆಯಲು ಹೋಗಿ ಪ್ರತಿಬಾರಿ ಸೋತು ಹೋಗುತ್ತಿದ್ದೆ.ಹಕ್ಕಿಗಳು  ಹೆದರುತ್ತಿದ್ದವು..ಅಧ್ಯೇಗೋ ಮಾಡಿ ಒಂದು ಚಿತ್ರದಲ್ಲಿ ಈ ಹಕ್ಕಿ ಮರಿಗಳು ಸೆರೆಯಾದವು.

ಸ್ವಲ್ಪ ದಿನದ ನಂತರ ಹಾರಾಡಲು ಕಲಿಸುತ್ತಿದ್ದ ಅಮ್ಮ..ಕಲಿಯುತ್ತಿದ್ದ ವಿಧೇಯ ಮರಿಗಳು. ಅವು ಹಾರಿ ಹೋಗಲು ತಯಾರಿ ನಡೆಸಿದ್ದವು. ಯಾಕೋ ಆದಿನ ಭಾಳ ಬೇಜಾರಾಗಿತ್ತು.ಒಂದು ವಾರ ಕಳೆದಿತ್ತಷ್ಟೆ ಮತ್ತೆ ಗೋಡೆಗೆ ಗೂಡು. ಹಸಿ ಮಣ್ಣಿನ ಸುವಾಸನೆ, ಮತ್ತೊಂದು ಮಗದೊಂದು ಗೂಡು. ಮೊಟ್ಟೆ, ಆದರೆ ಆ ಹಕ್ಕಿ ಇನ್ನೂ ನನಗೆ ಅಪರಿಚಿತ ಗೂಡಿನ ಚಿತ್ರ ತೆಗೆದು ಫೆಸ್ಬುಕ್ ನಲ್ಲಿ ಹಾಕಿದೆ. ಬೆಂಗಳೂರಿನ  ಅಂಜಲಿ ರಾಮಣ್ಣ, ೨ ನಿಮಿಷಕ್ಕೆ  ಪ್ರತಿಕ್ರಿಯಿಸಿದರು..THE BARN SWALLOW. ಸರಿ ಕನ್ನಡದ ಹೆಸರೇನು???ಆಗ ಮತ್ತೊಂದು ಪ್ರತಿಕ್ರಿಯೆ. ಧಾರವಾಡದ ಹರ್ಷವರ್ಧನ್ ಶೀಲವಂತ್ ಅವರು ಆ ಹಕ್ಕಿಯ  ಕನ್ನಡದ ಅದೆಷ್ಟು ಚಂದದ ಹೆಸರು ಬರೆದಿದ್ದರು..''ಅಂಬರ ಗುಬ್ಬಿ''ಹೆಸರು ಕೇಳಿಯೇ ರೋಮಾಂಚನ ಆಗಿತ್ತು..ಗೆಳತಿ ಅಂಜಲಿ‌ ಬಾಣಂತನ ಕ್ಕೆ ಅಂಟಿನ್ಉಂಡೆ  ಕಳಿಸಲ ಅಂದ್ರು.

ಇಲ್ಲಿಯ ಹೆಣ್ಣುಮಕ್ಕಳು ಹೆರಿಗೆಯ ನಂತರ ಮಗುವನ್ನು ಬಾಸ್ಕೆಟ್ ನಲ್ಲಿ ಹಾಕಿಕೊಂಡು‌ ಡ್ರೈವ್ ಮಾಡುತ್ತಾರೆ ಹಕ್ಕಿಗಳ ಕತೆ ಏನೋ ಯಾರಿಗ್ಗೊತ್ತು ಅಂದೆ.ಆಗ ಹೇಳಿದ ಮಾತು ಮಾತ್ರ ಮನ ತಟ್ಟಿತ್ತು..''ಏನೇ ಹೇಳಿ ಅಮಿತಾ ಗೂಡು ಕಟ್ಟಿ ಮರಿ ಮಾಡಿ ಮಾತೃತ್ವ ಪಡೆಯುವ ಆ ಆನಂದದ ಮುಂದೆ ಬೇರೆಲ್ಲವನ್ನೂ ನಿವಾಳಿಸಿ ಎಸೆಯಬೇಕು..''ನಿಜ ಅಲ್ಲವೇ? ಬೇರೆಲ್ಲ ವಿಷಯದಲ್ಲಿ ಮನುಷ್ಯ ಸಾಕಷ್ಟು  ತನ್ನದನ್ನು ಸಾಧಿಸಿರಬಹುದು.ಆದರೆ ಮನೇ ,ಮಗು ಮತ್ತು ಅವುಗಳ ಆರೈಕೆ ಬೆಳವಣಿಗೆಯ ವಿಷಯದಲ್ಲಿ ಮಾತ್ರ ಹಕ್ಕಿಯ ಜಾಡನ್ನೇ ಹಿಡಿದ.‌ಆತ ಮಾಡಿದ ಒಂದೇ ಒಂದು ಹೆಚ್ಚುಗಾರಿಕೆ ಎಂದರೆ , ಮಕ್ಕಳನ್ನು ಬೆಳೆಸಿ ಅವುಗಳಿಂದಲೂ ಅದೇ ತೆರನಾದ ಪ್ರೀತಿ ಮಮತೆ ಬಯಸಿದ. ಆದರೆ ಹಕ್ಕಿ ಮಾತ್ರ ತನ್ನ ಕರ್ತವ್ಯ ಮಾಡಿ ತನ್ನಷ್ಟಕ್ಕೆ ಸುಮ್ಮನಾಯಿತು..

ಅದ್ಯಾಕೆ ಇಂತದ್ದೆಲ್ಲ ನನ್ನ ಕಣ್ಣಿಗೆ ಬೀಳುತ್ತೆ ????ಒಂದು ಪುಟ್ಟ ಹಕ್ಕಿ ಮನಸಿನಲ್ಲಿ ಮೂಡಿಸುವ ಭಾವಗಳು ಸಾವಿರ.ಭಾವಗಳನ್ನು ಬೆಳೆಸಲೆಂದೇ ಬಾಂಧವ್ಯ ಬೆಳೆಯುತ್ತವೆಯ???ಸಾವಿರ ಆಲೋಚನೆಗಳ ಇಂಚರ. ಸಧ್ಯಕ್ಕೆ ನಾನು ಅಂಬರ ಗುಬ್ಬಿಯ ಮರಿಗಳೊಂದಿಗೆ ಬ್ಯುಸಿಯೋ ಬ್ಯುಸಿ. ನೀವು ಒಮ್ಮೆ ನಿಮ್ಮ ಅಕ್ಕ ಪಕ್ಕ ಕಣ್ಣು  ಹೊರಳಿಸಿ..ಅಲ್ಲೊಂದು ಪುಟ್ಟ ಮೂಕ ಜೀವಿ ನಿಮ್ಮ ಒತ್ತಡಗಳಿಗೆ  ಮಾತಿಲ್ಲದೆ ಸಾವಿರ ಸಮಾಧಾನ ಹೇಳಬಹುದು. ಒಮ್ಮೆ ಪ್ರಯತ್ನಿಸಿರಿ..ನನ್ನ ಅಂಬರ ಗುಬ್ಬಿಗಳಿಗೆ ನಿಮ್ಮ ಒಲುಮೆ ಹಾರೈಸಿ...

( ೨೮/೦೮/೨೦೧೧ ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆ ಪುರವಣಿಯಲ್ಲಿ ಪ್ರಕಟಿತ )

7 comments:

 1. ನಿಮ್ಮ ಲೇಖನ ಮತ್ತು ನಿಮ್ಮ ವಿಚಾರ ತುಂಬ ಸುಂದರವಾಗಿದೆ. ನನಗೂ ಸ್ವಲ್ಪ ಇಂತವೇ ಕಣ್ಣಿಗೆ ಬೀಳುತ್ತವೆ. ನಮ್ಮ ಮನೆಯ ಬಾಲ್ಕನಿಯ ಪುಟ್ಟ ಜಾಗದಲ್ಲಿರು ಪಾಟ್ ಗಳಲ್ಲಿ ಇದುವರೆಗೆ ಅನೇಕ ಪಾರಿವಾಳಗಳ ಬಾಣಂತನವಾಗಿದೆ. ಅಲ್ಲದೆ ಪುಟ್ಟ ಗುಬ್ಬಿಗಳು , ಸನ್ ಬರ್ಡ್ , ಒಂದು ಅಳಿಲು ಸಂಸಾರ ನಮ್ಮನೆಯ ಕಾಯಂ ಅತಿಥಿಗಳು :) . ಅವುಗಳ ಬಗ್ಗೆ ನನ್ನ ಲೇಖನ ಇಲ್ಲಿದೆ , ಬಿಡುವಿದ್ದಾಗ ಓದಿ.
  http://bhoorame.blogspot.com/2010/09/blog-post_27.html
  ಮತ್ತು
  http://bhoorame.blogspot.com/2009/08/blog-post_12.html

  ReplyDelete
 2. khandita suma....hagidrenanu nivu bandhugalu antaitu..

  ReplyDelete
 3. ಗುಬ್ಬಚ್ಚಿಗಳೆಂದರೆ....ಪ್ರೀತಿ,ಮಮತೆ..
  ಮಾನವೀಯ..
  ಭಾವ ಸಂಬಂಧಗಳ ಸಂಕೇತ..

  ನಮ್ಮ ದೇಶ.. ನಮ್ಮವರಿಂದ ದೂರವಿದ್ದು..
  ಗುಬ್ಬಚ್ಚಿಗಳ ನೆನಪಾಗಿದ್ದು ಸಹಜ.. ತುಂಬಾ ಸೊಗಸಾದ ಲೇಖನ..

  ಓದಿದ ಮೇಲೆ ನಮ್ಮನೆಯ ಗುಬ್ಬಚ್ಚಿ ಗೂಡಿನಲ್ಲಿರುವ ಮರಿಗಳ ನೋಡಿ ಬಂದೆ...

  ReplyDelete
 4. ನಿಮ್ಮ ಲೇಖನಕ್ಕೂ ಲೇಖನದ ಗುಬ್ಬಚ್ಚಿಗಳಿಗೂ ಶುಭಾಶಯ ... :) ಚೆನ್ನಾಗಿದೆ.

  ಹಬ್ಬದ ಶುಭಾಶಯಗಳು.

  ReplyDelete
 5. ಭಾವಪೂರ್ಣ ಲೇಖನ. ವಿ ಕ ದಲ್ಲಿ ಓದಿದ್ದೆ. ಅಭಿನ೦ದನೆಗಳು.

  ಅನ೦ತ್

  ReplyDelete
 6. ಸುಂದರವಾದ ಲೇಖನ. ಅಷ್ಟೇ ಸುಂದರವಾದ ಕಲ್ಪನೆಗಳು.

  ಚಿಕ್ಕವನಿದ್ದಾಗ ನಾನು ಹೀಗೆ ಮನೆಯ ಸುತ್ತ ಹಕ್ಕಿಯ ಗೂಡುಗಳನ್ನು ಹುಡುಕುತ್ತಿದ್ದೆ, ಅವಕ್ಕೆ ತಿನ್ನಲು ಅಕ್ಕಿ, ಬೇಳೆ ಎಲ್ಲ ಹಾಕುತ್ತಿದ್ದೆ. ಆದರೆ ನನ್ನ ಅಜ್ಜ ನಾನೆಲ್ಲೋ ಹಕ್ಕಿಗಳಿಗೆ ತೊಂದರೆ ಕೊಡುತ್ತಿದ್ದೇನೆ ಎಂದು "ಆ ಹಕ್ಕಿಗಳ ಗೂಡಿನ ಹತ್ತಿರ ಹೋಗಬೇಡ, ಅವು ಇನ್ನು ನಮ್ಮ ಮನೆಗೆ ಬರುವುದಿಲ್ಲ" ಎಂದು ಹೆದರಿಸುತ್ತಿದ್ದರು. ಅದರೂ ಹೈ ಸ್ಕೂಲ್ ನಲ್ಲಿದಾಗ ೧ ಜೊತೆ ಪಾರಿವಾಳಗಳನ್ನು ತಂದು ಸಾಕಿದೆ. ಅವು ಮೊಟ್ಟೆ ಇಟ್ಟು ಮರಿ ಮಾಡಿ, ಅವುಗಳ ಸ್ನೇಹಿತರನ್ನು ಕರೆತಂದು ನಮ್ಮ ಮನೆಗೆ ಸೇರಿಸುತ್ತಿದ್ದವು. ಹಾಗೆಯೆ ಅವುಗಳ ಸಂಖ್ಯೆ ೩೦ (ಮುವತ್ತ್ತು) ದಾಟಿತು. ಮುಂದೆ ಕಲಿಯಲು ನಾನು ಮಂಗಳೂರು ಸೇರಿದೆ ಹಕ್ಕಿಗಳು ಇನ್ಯಾರದ್ದೋ ಮನೆ ಸೇರಿದವು. ಅವುಗಳನ್ನು ಕೊಡುವಾಗ ಆದ ನೋವು ಅಷ್ಟಿಷ್ಟಲ್ಲ. ಇಗಲೂ ಮನಸ್ಸಿಗೆ ತುಂಬಾ ನೋವಾಗುತ್ತದೆ.

  ReplyDelete