Monday, September 12, 2011

ಪಾತ್ರ ಅದಲು- ಬದಲು

 ಮಳೆ ಜೋರಾಗುತ್ತಿದೆ...ಬೇಗ್ ಬೇಗ ಬಾ...ಹಾಗೆನ್ನುತ್ತ ಮಗುವಿನ ಕೈ ಹಿಡಿದುಕೊಂಡು ಓಟದ ನಡಿಗೆ ನಡೆಯುತ್ತಿದ್ದೆ....ಆತನೋ ಅಲ್ಲಿ ನಿಂತ ನೀರಲ್ಲಿ ಪಟ್ಟನೆ ಜಿಗಿದು ಪಚ್ಚ್ಹ್ ಅಂತ ಶಬ್ದ ಮಾಡಿ..ಮೈ ತುಂಬಾ ನೀರು ಮಾಡಿಕೊಳ್ಳುತ್ತಿದ್ದ....ಆತನೊಂದಿಗೆ ನಾನು ತೊಯ್ಯುತ್ತಿದ್ದೆ...ಹಾಗ ಮಾಡಬೇಡ...!ಸುಮ್ನೆ ಬರೋಕಗಲ್ವಾ????ಹಾಗಂತ ಮತ್ತೆ ನಾ ನಡೆಯುತ್ತಿದ್ದೆ...ಮತ್ತೆ ಅವನದು ಅದೇ ಕಥೆ...ತಲೆಯ ಮೇಲೊಂದು ಮೊಟಕಿದೆ...ಬೇಗ ಬಾ ಅಂದ್ರೆ ತರ್ಲೆ..ಅದು ಮಳೆಲಿ...ನಾಳೆ ನೆಗಡಿ ಆಗುತ್ತೆ ಆಗಲೋ ನಾನೆ ಬೈಸ್ಕೊಬೇಕು ನಿನ್ ಪಪ್ಪ ನಾ ಹತ್ರ...ಅಮ್ಮನ್ನಿಗೆ ಯಾಕ ಹೀಗ್ ತೊಂದ್ರೆ ಕೊಡ್ತೀಯ???ಹಾಗಂತ ಕೇಳಿದೆ...ಮಗು ತಲೆಕೆಳಹಾಕಿ ಸುಮ್ಮನೆ ನಡೆಯ ತೊಡಗಿತು.....
ಮಳೆ ಜೋರಾಯಿತು..ನಡೆಯೋಕೆ ಆಗ್ತಿಲ್ಲ..ಅಲ್ಲೇ ಒಂದು ಕಂಪೌಂಡಿನ ಪಕ್ಕದ ಮಾಡಿಗೆ ಆಸರೆಯಂತಿದ್ದ ಮರದ ಕೆಳಗೆ ನಿಂತು ಕೊಂಡ್ವಿ.....

ಮರದ ಮೇಲೆ ಬಿದ್ದ ಮಳೆಹನಿಗಳು...ಎಲೆಗಳ ತುದಿಯಿಂದ ಒಂದಂದಾಗಿ ಉದುರುತ್ತಿದ್ದವು..ಬೀಳು ವ ಮಳೆ ಹನಿಗಳತ್ತ ನಿರಾಯಾಸವಾಗಿ ಕೈ ಚಾಚಿದೆ...ಪ್ರತಿ ಹನಿಯು ಕೈಮೇಲೆ ಬಿದ್ದು ಸಿಡಿಯುತ್ತಿತ್ತು..ಅದನ್ನು ಅನಂದಿಸ ತೊಡಗಿದೆ...ಮನಸು ಹಿಂದೆ ಓಡಿತು...ಮುಂಚೆ ಮಳೆಗಾಲ..ಎಂಬುದು...ಚೈತನ್ಯ ದಾಯಿ.ಸಮಯ..ಆಗಲೇ ಅಲ್ವೇ ಶ್ರಾವಣದ ಸಂಭ್ರಮ..ಅರಿಶಿನ ಕುಂಕುಮ ಪೂಜೆ ಎಂದು ಅಮ್ಮಂದಿರೆಲ್ಲ ಬ್ಯುಸಿ ಯೋ ಬ್ಯುಸಿ..ನಾನೂ ಅವರೊಂದಿಗೆ ಹೋಗುತ್ತಿದ್ದೆ...ರಸ್ತೆಯ ಹೊಂಡಗಳಲ್ಲಿ  ಮಳೆ ನೀರಲ್ಲಿ ಮಾಡಿದ ಚಹಾ ಬಣ್ಣದ ನೀರು...ಕಾಲು ತಡೆಯುವುದೇ ಇಲ್ಲ.. ಒಮ್ಮೆ ಜಿಗಿದು ಬಿಡೋಣ ಅನಿಸಿ ಅದರಲ್ಲಿ ಆತ ಆಡಿದಾಗೆಲ್ಲ  ಅಮ್ಮ ತಲೆಗೊಂದು ಮೊಟಕುತ್ತಿದ್ದಳು...ಯಾವಾಗ್ ಬುದ್ಧಿ ಬರುತ್ತೋ...ಹುಶಾರಿಲ್ದೇ  ಮಲ್ಕೋ...ಶಾಲೆಗೆ  ಮತ್ತೆ ರಜೆ ಹಾಕು ..ಮತ್ತೆ ನೀ ನರಳೋದು...ಇರೋ ಕೆಲಸ ಏನ್ ಕಮ್ಮಿನ ಮತ್ತೆ ನೀ ಇದನ್ನೊಂದು ತಗಲಿಹಾಕಿಕೊಂಡು......ಅಪ್ಪನ ಹತ್ರ ನಾ ಬೈಸ್ಕೊಬೇಕು....''ಅಮ್ಮನ ಸಹಸ್ರಾರ್ಚನೆ ಮುಂದುವರಿಯುತ್ತದೆ......

ಆಗೆಲ್ಲ ನಾ ಅಂದುಕೊಳ್ಳೋದಿತ್ತು ನಾ ಅಮ್ಮ ಆದಾಗ ನನ್ ಮಗು ನಾನು ಇಬ್ಬರು ಮಳೆ ನೀರಲ್ಲಿ ಆಟ ಆಡ್ತೀವಿ..ನಾ ಯಾವತ್ತು ಅಮ್ಮನಂತೆ ನನ್ನ ಮಗುನ ಬೈಯ್ಯಲ್ಲ..ಬರೀ ಮುದ್ದು ಮುದ್ದು ಮುದ್ದು ಅಷ್ಟೇ.. ಇಷ್ಟಕ್ಕೂ ಅಮ್ಮ ಯಾಕೆ ಹೀಗ್ ಆಡ್ತಾಳೆ ಅಂತ ಆಲೋಚಿಸುವಷ್ಟು ಬುದ್ಧಿ  ಬಲಿತಿರಲಿಲ್ಲ....ಬಾಲ್ಯ ದಾಟಿತು...ಅಂದುಕೊಂಡ ಮಾತುಗಳು ಮಾತ್ರ ಮನಸಲ್ಲೇ ಉಳಿದಿದ್ದವು.
 
.ಈಗ ನಾನು ಅಮ್ಮ.... ನಾನೂ ಅಮ್ಮ ನಂತೆ ವರ್ತಿಸಿದೆ....ಪಾತ್ರಗಳು ಅದಲು- ಬದಲಾದಂತೆ ಮನುಷ್ಯನ ಬುದ್ಧಿ  ಮಾತು,ಆಲೋಚನೆ ಎಲ್ಲವು ಬದಲಾಗುತ್ತ????ನಾವ್ಯಾಕೆ ಅಷ್ಟು ಬೇಗ ಬದಲಾಗ್ತೀವಿ????ನಾವು ದೊಡ್ಡೋರು ಅನ್ನೋ ಒಂದು ಅಹಮ್ಮಿನಲ್ಲಿ ಮನಸಿನ ಒಂದು ಮೂಲೆಯಲ್ಲಿ ಅಡಗಿ ಕುಳಿತಿರೋ..ಪುಟ್ಟ ಮಗುವನ್ನು ಹೊರಬರಲು ಬಿಡುವುದೇ ಇಲ್ಲ...ಅಂತರಂಗದಲ್ಲಿ ಬಾಲ್ಯದ ಒರತೆ ಅದೆಲ್ಲೋ ಮುಚ್ಚಿ ಹಾಕಿಬಿಡುತ್ತೇವೆ..ನಮ್ಮ ಕನಸುಗಳು..ನಮ್ಮ ಆಲೋಚನೆಗಳು..ಮೆಟ್ಟಿದ ಮನೆಯ ಅಚ್ಚಲ್ಲಿ ಅಚ್ಹಾಗಿ ಬಿಡುತ್ತವೆ...ನಾವೂ ಅಮ್ಮ ಆಗಿಬಿಡುತ್ತೇವೆ....ಹೊರಗಿನ ಮಳೆಯೊಂದಿಗೆ ಮನಸು ಒದ್ದೆ ಒದ್ದೆ.......

ಅಮ್ಮನಿಗೆ ಒಮ್ಮೆ sorry ಹೇಳ್ಬೇಕು ಅನ್ಕೊಂಡೆ...ಮಳೆ ಕೊಂಚ್ ನಿಂತಂತಾಯಿತು...ಮಗ ಇನ್ನೂ ಗಲ್ಲ ಉಬ್ಬಿಸಿಕೊಂಡೆ ಇದ್ದ ...ಮನೆಗೆ ಬಂದೊಡನೆ ಪುಟ್ಟ  ಪುಟ್ಟ  ಕಾಗದದ ದೋಣಿಗಳೊಂದಿಗೆ ರಸ್ತೆಯಲ್ಲಿ ಹರಿದು ಬರುತ್ತಿದ್ದ ನೀರಲ್ಲಿ ನಮ್ಮ ದೋಣಿಯಾನ ಆರಂಭವಾಯಿತು.. ಮಗು ಸಿಟ್ಟು ಮರೆತು ಮನಸ್ಪೂರ್ತಿ ಆಡ ತೊಡಗಿತ್ತು......ಆಗ ನೆನಪಾದ ಹಾಡುಗಳೆಷ್ಟೋ...ಕವನಗಳೆಷ್ಟೋ.... ಮಗ ''ಅಮ್ಮ  ನೀನು ಗುಡ್ ಗರ್ಲ್ ''ಅಂತ ಸರ್ಟಿಫಿಕೆಟ್ ಬೇರೆ ಕೊಟ್ಟ. ಬಾಲ್ಯದುದ್ಯಾನದಲಿ ಹೂತು ಹೋಗಿದ್ದ.. ಕನಸ ಬೀಜಕ್ಕೆ.ಒಲವಿನೊರತೆಯ ಸಿಂಚನ... ಮನದಲ್ಲಿ ಮಾತ್ರ ಅವೆ ಪ್ರಶ್ನೆಗಳ ಮಹಾಪೂರ ..


(www.vijayanextepaper.com ವಿಜಯನೆಕ್ಷ್ತವಾರಪತ್ರಿಕೆಯ ಅವಳ ಡೈರಿ ಅಂಕಣದಲ್ಲಿ ಪ್ರಕಟಿತ )

3 comments:

  1. ಚೆನ್ನಾಗಿದೆ... ನಮ್ಮೂರ ಮಳೆ...ತೋಡಿನಲ್ಲಿ ಹರಿಯೋ ಕೆಂಪು ಕೆಂಪು ನೀರು... ಬಿಟ್ಟ ಕಾಗದದ ದೋಣಿಗಳು.. ಅದರ ಮೇಲೊಂದು ಸದಾಪುಷ್ಪ ಹೂ ಇಟ್ಟು ಕಳಿಸಿದ್ದು... ಅವೆಲ್ಲ ಇಲ್ಲೆಲ್ಲಿ ಸಿಗುತ್ತೆ? ಮಗನನ್ನು ಖಂಡಿತಾ ಇನ್ನಷ್ಟು ಆಡಲು ಬಿಡಿ ಎಂಬ ಕಂಡಿಷನ್ನು ಹಾಕ್ತೀನಿ ನಿಮಗೆ.. ಬಟ್ ಇನ್ನಷ್ಟು ನೆನಪು ಬಿಚ್ಚಿಡಬೋದಿತ್ತು ಅಲ್ವಾ?

    ReplyDelete
  2. ಚೆನ್ನಾಗಿದೆ ಬರಹ .. ಒಳ್ಳೆ ಆಪ್ತತೆಯಿದೆ :)

    ReplyDelete
  3. ಸುಂದರ.. ಮನಸ್ಸಿಗೆ ತಟ್ಟುವ ಲೇಖನ...
    ಧನ್ಯವಾದಗಳು...

    ReplyDelete