ಪ್ರತಿ ರಜೆಯಲ್ಲೂ ಅಜ್ಜಿ ಮನೆಯಲ್ಲಿ ಕ್ಯಾಂಪ್ ಹಾಕಿದರೂ ಈ ಬಾರಿ ಅಜ್ಜಿ ಇಂದ ಉಪಯುಕ್ತ ಮಾಹಿತಿ ಪಡೆದ ಹೆಮ್ಮೆ ನನಗೆ..ಗೆಣಸಿನ ಹಪ್ಪಳ ಗಳನ್ನ ಮೆಲ್ಲುತ್ತ ಅಜ್ಜಿ ಜೊತೆ ಹರಟೆ ಹೊಡೆಯುತ್ತಿದ್ದಾಗ ಪಕ್ಕದ ಮನೆಯಾಕೆ ಕೊಡದಂತೆ ಹೊತ್ತು ತಂದ ಕಟ್ಟಿಗೆಯ ವಸ್ತುವೊಂದು ನನ್ನ ಗಮನ ಸೆಳೆಯಿತು ,ಅಜ್ಜಿಯನ್ನ ಕೇಳಲು ಅವರು ಅದನ್ನ ಕಳಸಿಗೆ ಅಂತ ಹೇಳಿ ಅದರ ವಿವರ ಕೊಡೋದಿಕ್ಕೆ ಪ್ರಾರಂಭಿಸಿದರು.
ಸೇರು,ಪಾವು, ಕಾಲುಪಾವು ಹೀಗೆ ಅನೇಕ ಅಳತೆ ಗಳನ್ನ ನಾವು ಕೇಳಿಯೇ ಇರ್ತೀವಿ ಕಳಸಿಗೆ ಕೂಡ ಭತ್ತವನ್ನ ಅಳೆಯಲು ಇರುವ ಮಾಪು
೩ ಕಳಸಿಗೆ ಬತ್ತ ಹಾಕಿದರೆ ಒಂದು ಅಕ್ಕಿ ಮೂಟೆ ಆಗುತ್ತೆ ಅನ್ನೋದು ಇವರ ಲೆಕ್ಕಾಚಾರ.
digital ಯುಗದಲ್ಲೂ ಕುಂದಾಪುರದ ಪುಟ್ಟ ಹಳ್ಳಿ ಕೋಣಿ ಯಲ್ಲಿ ಈ ಕ್ರಮದಲ್ಲೇ ಜನಪದರು ಇನ್ನು ತಮ್ಮ ಕೃಷಿ ಕಾಯಕಕ್ಕೆ,ಮೆರಗು ನೀಡುತ್ತಿದ್ದಾರೆ
ಮತ್ತು ಸುತ್ತ ಮುತ್ತಲ ಜನರೆಲ್ಲಾ ಕಳಸಿಗೆ ಒಯ್ಯಲು ಬರುವುದು ನನ್ನ ಅಜ್ಜಿ ತಾರಮ್ಮನ ಮನೆಗೆ.
ಹಳೆಯ ವಸ್ತು ಗಳೆಲ್ಲ ಅಟ್ಟ ಸೇರಿ ಕಾಲ ವಾದರೂ ಈ ಕಳಸಿಗೆ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದು ಸಾಹಸ ವಲ್ಲದೆ ಮತ್ತೇನು ????
No comments:
Post a Comment