ನೋಡನೋಡುತ್ತಲೇ ತಿಂಗಳು ಕಳೆಯಿತು ...ನಾ ಬರುವಾಗ ಇಲ್ಲಿನ ಮರಗಳು ಹಸಿರೆಂದೆರೇನು ಅನ್ನೋದು ನಮಗೆ ಗೊತ್ತೇ ಇಲ್ಲ ಅನ್ನೋ ಹಾಗೆ ಕೆಂಪು ಎಲೆಗಳನ್ನ ಹೊತ್ತು ಮಡಿ ಸೀರೆ ಉಟ್ಟು ಮದುವೆಗೆ ಹೊರತು ನಿಂತ ನೀರೆಯರಂತೆ ಕಾಣುತ್ತಿದ್ದವು .ಆಗ ಇಲ್ಲಿ ಆಟೊಮ್ ತಿಂಗಳು ....
ಇಗ ಮರದ ಬಣ್ಣ ಬಿಡಿ ನೆಲವು ಕಾಣದಷ್ಟು ಹಿಮ ಹೊದ್ದುಕೊಂಡಿದೆ...
ಇದೆಲ್ಲ ಹೊಸ ಅನುಭವಗಳು..ಮೊದಲ ಅನುಭವಗಳು..ಬದುಕಿನಲ್ಲಿ ಬರುವ ಪ್ರತಿ ಮೊದಲುಗಳು ಅವರ್ಣನೀಯ..ಹಾಗೆ ಇದುಕೂಡ...
ಮೊದಮೊದಲಂತೂ ಬಿಳಿಯರನ್ನು ನೋಡಿದರೆ ಹೆಂಗೋ ಅನಿಸೋದು .ಭಾರತ ದಲ್ಲಿ ಅವರನ್ನು ಕಂಡರೆ ಮಾತಾಡಿಸಿ ಗೆಳೆತನ ಮಾಡಿಕೊಂಡು ಅವರನ್ನು ಮನೆಗೆ ಕರೆದುಕೊಂಡು ಹೋಗಿ ಅಥಿತಿ ಸತ್ಕಾರ್ ಮಾಡುತ್ತಿದ್ದವಳು ನಾನೇನಾ ಅಂತ ನನಗೆ ಅನುಮಾನ .....
ಆದಿನ ಮಾರ್ಕೆಟ್ ಗೆ ಹೋದಾಗ ಇವರ ಹತ್ತಿರ ಅಂದೆ ಎಲ್ಲ ಹೋದರು ಈ ಬಿಳಿಯರೇ ಕಾನಿಸುತ್ತಾರೆ.. ಸ್ವಲ್ಪ ದಿನ ಹೋದರೆ ಕಣ್ಣು ಬಿಳಿ ಆಗುತ್ತೆ ಇವರನ್ನ ನೋಡಿ...ಅದಕ್ಕೆ ಇವರು 'ನೀ ಇರೋದು ಅವರ ದೇಶದಲ್ಲೇ ಅನ್ನೋದು ನೆನಪಿಡಬೇಕು ನೀನು ಅಂದ್ರು...ಅದು ಹೌದಲ್ಲವೇ..ಅವರ ಮನೆಗೆ ಬಂದು ಅವರನ್ನ್ ನೋಡಿದರೆ ಕಷ್ಟ ಆಗುತ್ತೆ ಅಂತ ಹೇಳಿದ್ರೆ???
ಆದ್ರೆ ಒಂದ್ ವಿಷ್ಯ ವಿಚಿತ್ರ ಅನಿಸಿದ್ದು ....ಸೂರ್ಯ ಮುಳುಗದ ನಾಡು ಅಂತೆಲ್ಲ ಹೊಗಳಿಸಿಕೊಳ್ಳುವ ಇಂಗ್ಲೆಂಡ್ ದೇಶದಲ್ಲಿ ಸೂರ್ಯ ಬರೋದೆ ಅಪರೂಪ...ಪಾಪ ಅವನಿಗೂ ಛಳಿ. ಸ್ನೌ ಫಾಲ್ ,ನೋಡಿ ಬೇಜಾರ್ ಬಂದಿರಬೇಕು..
ಬಿಸಿಲು ಬಂದರೂ ಅದು ಮೈಗೆ ತಾಗಲ್ಲ....
ನನ್ನ ಅಜ್ಜಿ ಯಾವಾಗಲು ಹೇಳೋ ಗಾದೆ ಒಂದಿದೆ,'ಹೊಸ ಮಡಿಕೆ ಕೊಣ್ ಕೊಣ್ ' ಅಂತ ನನ್ನದು ಹಾಗೆ ಮಗುವಿನಂತೆ.ಅಚ್ಹರಿ ತವಕ ಕುತೂಹಲ ದಿಂದ ಹೊಸತನ ಬದುಕಲ್ಲಿ ಬಂದ ಬದಲಾವಣೆ ಸ್ವಾಗತಿಸುತ್ತಿದ್ದಿನಿ ..ಅದಕ್ಕೆ ಇಷ್ಟೆಲ್ಲಾ ವಿವರಣೆ...
ಸ್ವಲ್ಪ ದಿನದ ನಂತರ ಅದೇ ಜೀವನ ಅಭ್ಯಾಸ ಆಗಿ ಹೋಗುತ್ತೆ .....
ಪೌಂಡ್ ಗಳನ್ನ ರೂಪಾಯಿ ಗೆ ಬದಲಾಯಿಸಿ...ಯಪ್ಪಾ ಇಷ್ಟಾ?ಅಂತ ಬಾಯಿ ಮೇಲೆ ಪೂರ್ತಿ ಕೈ ಇತ್ತು ಕಣ್ಣು ಅರಳಿಸೋದು ಇನ್ನು ಬಿಟ್ಟಿಲ್ಲ...ಅದು ಕಡಿಮೆ ಅದಾಗ ಮತ್ತೊಂದ್ ಪೋಸ್ಟ್ ...till than bye
Thursday, December 2, 2010
ಐರಿಶ್ ನಾಡಿನಲ್ಲಿ ನಾ..ಭಾರತದ ಕುವರಿ
ಚಿತ್ರಗಳು
hosadu

Subscribe to:
Post Comments (Atom)
No comments:
Post a Comment