ಒಲವ ಚಾದರಿನೊಳಗೆಒಲವ ಚಾದರಿನೊಳಗೆ
ಚಲುವ ಕನಸುಗಳು
ಕಾಲುಚಾಚಿ ಕನವರಿಸುತಿದೆ
ಎಲ್ಲೋ ಇರುವ ನಿನ್ನ ನೆನೆದು........
ಹೊಂಟ ಹಕ್ಕಿಸಾಲ
ಹಿಂದಿಂದೆ ಕಣ್ಣ ಕೀಲಿಸಿ
ನಡೆದರೂ...
ಬಲಿಯದ,ಪ್ರೀತಿ ರೆಕ್ಕೆಗೆ ;
ನಿನ್ನ ಪ್ರೀತಿ ಶಕ್ತಿಯದೆ ನೆನೆಪು...!
ಭಾವನಾ....
ಲೋಕದ ಭಾವ -ಬಂಧುರದಿ
ಒಲವೆನ್ನಲಾರದ ದ್ವಂದ್ವದ
ಮೌನಕ್ಕೂ....
ಮಾತಿನ ಚಡಪಡಿಕೆ ..
ಹಾಡೊಮ್ಮೆ,ನಗುವೊಮ್ಮೆ ..
ಸುಮ್ಮನೆ ಮಾತೊಮ್ಮೆ
ನಿನ್ನ ಪರಿಗಿದೋ ಎದೆತಾಳ ಗಪ್ ಚಿಪ್ ..
ನೀ ಮಾತ್ರ ಸರಾಗ ....
ಒಲವ ಚಾದರ ಹೊದ್ದಾಗಿದೆ..
ಆಸೆ ನಿದ್ದೆ ಹತ್ತಾಗಿದೆ..
ಕನಸ ಕುದುರೆ ಏರಿ ಬರೊ ನಿನ್ನ ಕನವರಿಕೆಯೊಂದೆ ..
ನನ್ನ ಮುಂದಿರೋ ಚಿತ್ರ...
೨.ಯಾರೋ ಸಿಕ್ಕರು
ಚಂದ್ರ ಮುಖಿಯಂತೆ ,
ಮತ್ಯಾರೋ ಸಿಕ್ಕರು
ಕಥೆಒಳಗಿನ ಅಪ್ಸರೆಯಂತೆ
ಯಾರನ್ನ ಕಣ್ಣ ರೆಪ್ಪೆಯೋಲು ಕಾದಿದ್ದೆವೋ ..ಅವರೆ
ಕಣ್ಣೀರ ಹನಿಯಂತೆ ಹೊರ ನಡೆದರು
.೩
ಕಣ್ಣೇರು ಇರದಿದ್ದರೆ
ಕಂಗಳು ಇಷ್ಟು ಸುಂದರ ಅನಿಸುತ್ತಿರಲಿಲ್ಲ ..
ನೋವೆ ಇರದಿದ್ರೆ ..
ಖುಷಿಗೆ ಬೆಲೆಯೇ ಇರ್ತಿರ್ಲಿಲ್ಲ
ಬೇಡದೆ ದೇವರು ಕೊಟ್ಟರೆ ಪ್ರಾರ್ಥನೆ ಭಕ್ತಿಗೆ ಗೆ ಅರ್ಥವೇ ಇರುತ್ತಿರಲಿಲ್ಲ...
-೪
ಕಣ್ಣ ದಾರಿಯ ತುಂಬಾ ,
ನಿನ್ನ ನೆನಪ ಮೈಲುಗಲ್ಲು,,,,
ಹಳೆ ಹಾಡುಗಳ ನಿಲ್ದಾಣಗಳು..
ಪ್ರೀತಿ ಮಾತ್ ಸಾಲು ಮರಗಳು
..................ಎಲ್ಲಾ..........
ನೆನಪಾಗುತ್ತಿವೆ ...
ಹೇಳು ಕವಿತೆಯಂಥ ಹುಡುಗಿಯೇ
ಬದುಕಿನ ಯಾವ ತಿರುವಿನಲ್ಲಿ
ನನಗಾಗಿ ಕಾದು ನಿಂತಿರುವೆ ...
ದಣಿದರೂ...
ದೂರದೂರಿನವರೆಗೂ
ನಡೆದೇ ಬರುವೆ ಕಾಯುವೆಯಾ//????
-ಸಂತೇಬೆನ್ನೂರು ಫೈಜ್ನಟ್ರಾಜ್
ಕವನದ ಸಾಲುಗಳು ಅತ್ಯಂತ ಸರಾಗವಾಗಿ, ಸುಲಲಿತವಾಗಿ ಸಾಗುತ್ತವೆ. ಕವಿತೆ ಹೀಗೆ ಭಾವಪೂರ್ಣವಾಗಿ, ರಿದಂಪೂರ್ಣವಾಗಿ ಇದ್ದರೇನೆ ಚೆಂದ ಅನ್ನಿಸುತ್ತದೆ.
ReplyDelete