ನನ್ನ ಬಾಲ್ಯ ದಿಂದಲೂ ನನಗದು ಅಭ್ಯಾಸ..ಪ್ರಾಯಶಃ ಪ್ರತಿಯೊಬ್ಬರಿಗೂ ಇರುತ್ತದೋ ಏನೋ ಗೊತ್ತಿಲ್ಲ....ಹೊಸ ಸ್ಥಳಗಳು .ಹೊಸ ಜನರು ,ಕೆಲವೊಮ್ಮೆ ಘಟನೆಗಳು ಘಮಗಳೊಂದಿಗೆ ಬೆಸೆದು ನನ್ನ್ನ ಮನಸಿನಲ್ಲಿ ಅಚ್ಚಾಗಿ ಬಿಡುತ್ತದೆ...ಅಂಥದ್ದೇ ಕೆಲವನ್ನು ಬರೆದಿಡುವ ಉಮೇದಿನಲ್ಲಿದ್ದೇನೆ .......
- ಇದು ಎಲ್ಲರಿಗು ಆಗಿರೋ ಅನುಭವ...ಮೊದಲ ಮಳೆ ಬಂದಾಗ ಬರೊ ಹಸಿಮಣ್ಣ ವಾಸನೆ...ವಾಸನೆಯೊಂದಿಗೆ ನೆನಪುಗಳು..ನಾವು ಸಿರಸಿ ರಸ್ತೆಯ ಮನೆಯಲ್ಲಿರುವಾಗ ...ಸೋರುತ್ತಿದ್ದ ಮಾಳಿಗೆ,ಅಲ್ಲಲ್ಲಿ ಪಾತ್ರೆಗಳನ್ನಿಡುತ್ತಿದ್ದುದು,ಅದೇ ಸಮಯಕ್ಕೆ ಅಮ್ಮ ಮಾಡಿ ಕೊಡುತ್ತಿದ್ದ ಸಬ್ಬಸಿಗೆ ಪಲ್ಯ ಅಕ್ಕಿ ರೊಟ್ಟಿ..ಕೆಲವೊಮ್ಮೆ ಕದ್ದು ಮುಚ್ಹಿ ಮಾಡುತ್ತಿದ್ದ ಕೆರೆಮೀನಿನ ಸಾರು,ಅಕ್ಕಿ ಹಪ್ಪಳ...ಮಳೆ ನಿಂತ ಮೇಲೆ ಹಿತ್ತಲಲ್ಲಿ ಬರುತ್ತಿದ್ದ ಕಂಚಿ ಮರದ ಎರಡನೇ ಬೆಳೆಗೆ ಬಂದ ಹೂವಿನ ವಿಲಕ್ಷಣ ಘಮ ....ನೀರಲ್ಲಿ ಹಾಕಿಟ್ಟ ಕಳಿಲೆ...ಹಲಸಿನ ತೊಳೆ,ಮಾವಿನಕಾಯಿ ,ಅಡಿಗೆಗಳು.....ಹ್ಮ್ಮ್ಮ್ !!!!!!
- ದೇವಿಮನೆ ಘಟ್ಟ...ಅದು ನೆನಪಾಗೋದೆ ಅದರ ಕಾಡು ಹೂಗಳ ಘಮದಿಂದ...ಅದು ಶಿರಸಿ ಮತ್ತು ಕುಮಟೆ ಪೇಟೆ ಗಳನ್ನೂ ಸೇರಿಸುವ ಪುಟ್ಟ ಕಾಡಿನ ಹಾದಿ ಅಂದುಕೊಂಡು ನಾ ಆ ೬೬ ಮೈಲು ಗಳನ್ನೂ ಬರಿ ಕಾಡು ನೋಡುತ್ತಾ ಕಳೆದು ಬಿಡುತ್ತಿದ್ದೆ ,ಇನ್ನೇನು ಅಘನಾಶಿನಿ ಬಂದೆ ಬಿಡ್ತಾಳೆ ....ಆಕೆಯ ಹೆಸರನ್ನು ಕೇಳಿದ ಕೊಡಲೇ ನೆನಪಾಗೋದು ಹಸಿ.ತಾಜಾ ಮೀನಿನ ಘಮ...ಜೊತೆಗೆ ಕೆಂಪು ಮಣ್ಣು ...(ಮೀನು ತಿನ್ನದವರಿಗೆ ಈ ಘಮದ ಭಾಗ್ಯ ಇಲ್ಲ ..ಮೂಗಿಗೆ ಕರವಸ್ತ್ರ)
- ಮಂಗಳೂರು ಮಲ್ಲಿಗೆ.....ಈ ಘಮ ಎಂದಕೂಡಲೇ ನೆನೆಪಗೋದು south canara ಮದುವೆಗಳು ...ಬೇಸಿಗೆಯ ಬೆವರಿನಲ್ಲು ಜಗಮಗಿಸುವ ಸೀರೆ ಉಟ್ಟು ..ಬಸ್ಸಿಗೆ ಕಾದು ಜನ ಜಂಗುಳಿಯಲ್ಲಿ ಭೋಜನ ಮುಗಿಸಿ ಅಲ್ಲೇ ಕಾಮೆಂಟ್ ಒಗೆದು ಬರುವ ನಾರೀಮಣಿಗಳು.ಮತ್ತು ಚಿಕ್ಕವರಿದ್ದಾಗ ತಲೆತುಂಬ ಮಲ್ಲಿಗೆ ಮುಡಿಸಿ ಕನ್ನಡಿಯ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದು ..ಒಣಗಿ ಹೋದರೂ ಘಮ ಬಿಡದ ಆ ಮಲ್ಲಿಗೆಯ ಸಾರ್ಥಕತೆ
- ಉದಬತ್ತಿ (ಅಗರಬತ್ತಿ)........ಕೆಲವು ಅಗರಬತ್ತಿಗಳು ಎಷ್ಟು ಮರೆತರು ಆ ಘಟನೆ ಯೊಂದಿಗೆ ನೆನೆಪಿನಲ್ಲೇ ಘಮಘಮಿಸುತ್ತವೆ...ಚವತಿ ಹಬ್ಬದಂದು.ಪಪ್ಪ್ ಯಾವುದೊ ಸಿಟ್ಟಿನಲ್ಲಿ ನಮಗೆ ಹೊಡೆದದ್ದು...ಪರೀಖ್ಸೆ ಹೊತ್ತಿಗೆ ವಾಂತಿ ಭೇದಿ ಶುರುವಾಗಿ ಆಸ್ಪತ್ರೆಯ ಅತಿಥಿ ಆಗಿದ್ದು ...ಆ ಸಮಯದಲ್ಲಿ ಹಚ್ಹುತ್ತಿದ್ದ ಬತ್ತಿಯ ಘಮ ಈಗ ಆಘ್ರಾನಿಸಿದರು ಮತ್ತೆ ವಾಕರಿಕೆ ಬರುವುದಂತೂ ನಿಜ...
- ಬೆಂಗಳೂರಿನ ಬೀದಿಗಳಲ್ಲಿ ಕಾಫಿ ಘಮ ...ಅವನೊಂದಿಗೆ ಹಸಿದ ಹೊಟ್ಟೆಯಲ್ಲಿ ಲಾಲಬಾಗ್ ಸುತ್ತಾಡಿ ..ಕೊನೆಯಲ್ಲಿ ನಾಚಿ ನಾಚಿ ಹಸಿದ ವಿಷಯ ಹೇಳಿ ಅಕ್ಕಿರೊಟ್ಟಿ ತಿಂದಿದ್ದು .ಬೈಸಿ ಕೊಂಡಿದ್ದು...ಎದೆತುಂಬಿ ಹಾಡುವೆನು..,ಎಂದು ಮರೆಯದ ಹಾಡು,ಮನತುಂಬಿ ಹಾಡುವೆನು ಕಾರ್ಯಕ್ರಮಗಳ ಚಿತ್ರೀಕರಣ...(ಮುಂದುವರಿಯುವುದು.....)
super!!!!!
ReplyDeletechandada baraha
ಚೆನ್ನಾಗಿದೆ ಬರಹ ಧನ್ಯವಾದಗಳು...
ReplyDelete