Wednesday, December 8, 2010

ಹೊಸ ಯುಗದ ಮಕ್ಕಳು ....

ನನ್ನ ತಂದೆ ಮಾಡಿದ ಅಭ್ಯಾಸ ಅದು ದಿನ ಕಥೆ ಹೇಳೋದು.ನನ್ನಿಂದ ಶುರು ಆದ ಈ ರೂಡಿ ನನ್ನ ಮಗನಿಗೂ ಬಂತು...ಭಾರತ ದಲ್ಲಿದ್ದಾಗ ನನಗೆ ಯಾವುದೇ ತಕರಾರು ಗಳಿರಲಿಲ್ಲ ...ಆದ್ರೆ ಈಗ ಈ ಕಥೆ ಹೇಳೋ ಪ್ರವರ ನನಗೆ ಬಹಳ ಕಿರಿ ಕಿರಿ ತರ್ತಿದೆ ....
ಯಾವುದೊ ಕಾಲದಲ್ಲಿ ನೋಡಿದ ಫಿಲ್ಮ್ಒಂದರ ಕಥೆ ಕೇಳಿ ನಾ ಒಂದು ಸೀನ್ ಬಿಡದೆ ಕಣ್ಣಿಗೆ ಕಟ್ಟಿದಂತೆ ಹೇಳಬಲ್ಲೆ ಆದ್ರೆ ಮಕ್ಕಳ ಕಥೆಗಳು ಹಾಗಲ್ಲ ಅದಕ್ಕೆ ಬೇರೇನೆ ಶಕ್ತಿ ಬೇಕು ಕಥೆಯ ಮಧ್ಯ ಅವರು ಕೇಳೋ ಮುಗ್ಧ ,ಉದ್ಧಟ,ಪ್ರಶ್ನೆ ಗೆ ಉತ್ತರ ಕೊಡ್ಬೇಕು...ಅದು ನಿಜಕ್ಕೂ ಕಷ್ಟದ ಕೆಲಸ...ಕೆಲವೊಮ್ಮೆ ಹೇಳಿದ ಕಥೆಯನ್ನೇ ಹತ್ತುಬಾರಿ ಹೇಳ್ಬೇಕು.  ಒಂದು ಪದ ತಪ್ಪಾದರೂ ' ನೀ ಆಗ ಹೇಳಬೇಕಾದರೆ ಅದನ್ನ ಹೇಳಿರಲಿಲ್ಲ ಸುಳ್ಳ್ ಕಥೆ ಹೇಳ್ತೀಯ.ನನಗೆ' ಅನ್ನೋ ಪದವಿ ಬೇರೆ ...ಅಷ್ಟು ಕಥೆ ಗಳನ್ನ ಹುಡುಕಿ ತರಬೇಕಲ್ಲ...?????

ಹಾಗೆ ನಾನು ನನ್ನ ಶಾಲಾ ದಿನಗಳಲ್ಲಿ  ಅಕ್ಕವರಿಂದ ಕೇಳಿದ ಒಂದು ಕಥೆಯನ್ನು ನನ್ನ ಮಗನಿಗೆ ಹೇಳಿದೆ.........ಆ ಕಥೆ ಹೀಗಿದೆ
ರಾಮಪ್ಪ ಮತ್ತು ಭೀಮಪ್ಪ ಒಬ್ಬ ಗುರುಗಳ ಹತ್ತಿರ ವಿದ್ಯಾಭ್ಯಾಸಕ್ಕಾಗಿ ನಿಂತಿರುತ್ತಾರೆ ..ಅವರ ವಿದ್ಯಾರ್ಜನೆ  ಮುಗಿದ ದಿನ ಗುರುಗಳು ಅವರಿಬ್ಬರನ್ನು ಕರೆದು ಪುಟ್ಟ ಚೀಲದ ತುಂಬಾ ಕಡಲೆ ಬೀಜವನ್ನು ಕೊಟ್ಟು ನಿಮಗೆ ಒಳ್ಳೆದಾಗಲಿ ಇದರೊಂದಿಗೆ ನನ್ನ ಆಶಿರ್ವಾದ ವಿದೆ..೫ ವರ್ಷಗಳ ನಂತರ ನೀವು  ಮತ್ತೆ ಬಂದು ನನ್ನ ಭೇಟಿ ಮಾಡಿ  ಎಂದು ಹೇಳಿ ಬಿಳ್ಕೊಡುತ್ತಾರೆ   
ಹೀಗೆ ಹೊರಟ ಗೆಳೆಯರು ತಮ್ಮ ತಮ್ಮ ಊರು ತಲಪಿಕೊಳ್ತಾರೆ .ರಾಮಪ್ಪ ಗುರುಗಳು ಕೊಟ್ಟ ಕಡಲೆ ಬೀಜಗಳನ್ನ ದೇವರ ಮುಂದಿಟ್ಟು ಶೃದ್ಧೆ ಯಿಂದ  ದಿನ ಪೂಜಿಸುತ್ತಾನೆ..ಮತ್ತೆ ತನಗೆ ಒಳ್ಳೆದಾಗಲಿ ಅಂತ ಬೇಡಿಕೊಳ್ಳುತ್ತಾನೆ..................
ಇತ್ತ ಭೀಮಪ್ಪ  ಗುರುಗಳು ಕೊಟ್ಟ ಕಡಲೆ ಬೀಜ ಗಳನ್ನ ಬಿತ್ತಿ ಬೆಳೆತೆಗೆದು ವ್ಯಾಪಾರ ವ್ಯವಹಾರ ದಲ್ಲಿ ಪಳಗುತ್ತಾನೆ ೫ ವರ್ಷಗಳಲ್ಲಿ ದೊಡ್ಡ ವ್ಯಾಪಾರೀ ಎನಿಸಿಕೊಳ್ಳುತ್ತಾನೆ...
ಆ ದಿನ ಅವರು ಗುರುಗಳನ್ನು ಭೇಟಿ ಮಾಡುವ ದಿನ ..ಇಬ್ಬರೂ ಶಿಷ್ಯರನ್ನು ಗುರುಗಳು ಸ್ವಾಗತಿಸುತ್ತಾರೆ..ರಾಮಪ್ಪ ಗುರುಗಳ ಬಗ್ಗೆ ಅಸಮಧಾನ  ತೋರಿಸುತ್ತಾನೆ ಎಷ್ಟು ಪೂಜೆ ಮಾಡಿದರು ತನಗೆ ಒಳ್ಳೆಯದಗಲಿಲ್ಲ ದರಿದ್ರ ಹೋಗಲಿಲ್ಲ ಅಂತೆಲ್ಲ ದೂರುತ್ತಾನೆ...
ಭೀಮಪ್ಪ ತಾನು  ಆ ಕಡಲೆ ಯನ್ನೇ ತನ್ನ ಬಂಡವಾಳ ಮಾಡಿಕೊಂಡು  ಧನವಂತನಾದದ್ದನ್ನು  ವಿವರಿಸುತ್ತಾನೆ...
ಗುರುಗಳು ಒಬ್ಬ ಶಿಷ್ಯನಿಗೆ ತಮ್ಮ ಮೆಚ್ಹುಗೆ ಸೂಚಿಸಿ ಆಶೀರ್ವದಿಸುತ್ತಾರೆ ಆ ಶಿಷ್ಯ ಯಾರು????

ಈ ಪ್ರಶ್ನೆಯನ್ನು ನಮಗೆ ಕೇಳಿದಾಗ  ನಾವು ರಾಮಪ್ಪ ಎಂದು ..ಅವನು ಗುರುಗಳ ಉಡುಗೊರೆ ಯನ್ನ ಅಷ್ಟು ವರ್ಷ ಕಾದುಕೊಂದು ಪೂಜಿಸಿದ್ದಾನೆ ಗುರುಗಳು ಅವನಿಗೆ ಪ್ರಸನ್ನರಾಗಿ ವರ ಕೊಡುತ್ತಾರೆ ...ಎಂದು ಹೇಳಿದ್ದೆವು...ಆಮೇಲೆ ಅಕ್ಕವರು ಅದು ತಪ್ಪು ಕಲಿತ ವಿದ್ಯೆ ಯನ್ನು ಜೀವನಕ್ಕೆ ಅನ್ವಯಿಸಿಕೊಂಡು ಮುಂದೆ ಬರುವವನೆ ನಿಜವಾದ  ಶಿಷ್ಯ.....ಅಂದ್ರು ನಮಗೆ ಮನಸಲ್ಲೇ...ಆಲೋಚನೆ ''ಛೆ ನಾನ್ ಯಾಕೆ ಇ ಉತ್ತರ ಆಲೋಚನೆ ಮಾಡಲಿಲ್ಲ...ಅಕ್ಕವರನ್ನು ಪ್ರಸನ್ನ ಮಾಡಲು ಹೋಗಿ ತಪ್ಪು ಉತ್ತರ ಹೊಳೆಯಿತಲ್ಲ  ಛೆ....'' ಅಂತೆಲ್ಲ ............ನಿನ್ನೆ  ಇದೆ ಕಥೆಯನ್ನ ನನ್ನ ಮಗನಿಗೆ ಹೇಳಿದೆ ..ಮತ್ತು ಅಕ್ಕವರ ಸ್ಟೈಲ್ ನಲ್ಲೆ ಕೊನೆಗೆ ಪ್ರಶ್ನೆ ಕೇಳಿದೆ......ನನ್ನ ಮಗ ಹೇಳಿದ''ಭೀಮಪ್ಪ ಒಳ್ಳೆಯ ಶಿಷ್ಯ'' ನನಗೆ  ಅಕ್ಕವರು ಹೇಳಿದಂತೆ ಇವನಿಗೆ ವಿವರಣೆ ಕೊಟ್ಟು ಹೇಳಿ  ತಿಳಿದವಳು ಅನಿಸಿಕೊಳ್ಳುವ  ಹಂಬಲ  ಆದ್ರೆ ಇವನ ಉತ್ತರ ಕೇಳಿ ಮತ್ತೆ ಇರುಸು ಮುರುಸು... 


....ಯಾಕೆ? ಮತ್ತೆ ನನ್ನ ಪ್ರಶ್ನೆ...ಅಮ್ಮ ಅವನ ಹತ್ತಿರ ದುಡ್ಡು ಇದೆ ..ಅದಕ್ಕೆ.......  ಅವ ಹೇಳಿದ್ದು ಕೇಳಿ ಸ್ವಲ್ಪ ಹೊತ್ತು ಮಾತು ಹೊರಡಲಿಲ್ಲ.........ಅವತ್ತು ನಾವು  ೧ ನೆ ಕ್ಲಾಸ್ನಲ್ಲಿದ್ದೆವು  ನನ್ನ ಮಗನಿಗೆ ೪ ವರ್ಷ...
ಛೇ ನಾ ಅಷ್ಟು ಯೋಚಿಸ್ಲಿಲ್ವಲ್ಲ  ಅಂತ ಅನಿಸ್ತು..
ಬದಲಾದದ್ದು ಕಾಲವಾ? ಮಕ್ಕಳ ?ಯೋಚಿಸುವ ರೀತಿಯ?....ತಿಳಿತೀಲ್ಲ..ಹೊಸಯುಗ ಜನಿಸುವ ಮಗುವಿನ ತಲೆಯಲ್ಲೂ  ಏನೋ ನಮಗಿಲ್ಲದ  ಒಂದು ತಂತ್ರಾಂಶ  ಅಳವಡಿಸುತ್ತಿದೆ ಅನಿಸುತ್ತಿದೆ,,,,ಇರಲಿ ಮಕ್ಕಳು ನಮ್ಮವೇ  ಅಲ್ವಾ???

No comments:

Post a Comment