Friday, December 3, 2010

ಬೆಕ್ಕಿನ ಬಾಣಂತನ

ಆಕೆಯ ಹೆಸರು ಐಶ್ವರ್ಯ ,,,ಮನೆಯ ಹತ್ತಿರವಿದ್ದ ಫಾರೆಸ್ಟ್ ಡಿಪೋ ದಿಂದ ಹಾಡು ಬರುತ್ತಿದ್ದಾಗ..ನನ್ನ ಗೆಳತಿ ಮಂಗಳ ಕರೆದು.'ಅಮಿತಾ ನಿನಗೆ ಬೆಕ್ಕಿನ ಮರಿ ಬೆಕ??'ಅಂದ್ಲು...ಬೆಕ್ಕು ,ನಾಯಿ ಅಂದ್ರೆ ನಮ್ಮ ಜನ್ಮದ ಬಂಧುಗಳು ....ಮನೆಯಲ್ಲಿ ಬೆಕ್ಕಿನ ಮರಿ ಇತ್ತಾದರೂ ಅದನ್ನ ನೋಡಿದ ಮೇಲೆ ಇಲ್ಲವೆನ್ನಲು ಆಗಲೇ ಇಲ್ಲ ದಪ್ಪ ಬಾಲದ ಉದ್ದ ರೋಮದ ಆ ಬೆಕ್ಕಿನ ಮರಿಯನ್ನ ಎತ್ತ್ಕೊಂಡ್ ಬಂದೆ...ಆದ್ರೆ ನನ್ನ ಅಮ್ಮನಿಗೆ ಸಂಭಾಳಿಸೋದು ದೊಡ್ಡ ಕಷ್ಟ,,,ಅಮ್ಮನಿಗೆ ಅಡಿಗೆಕೊಣೆಯಲ್ಲಿ ಓಡಾಡೋ ಆ ಜೀವಿಯನ್ನ ಕಂಡರೆ ಅಷ್ಟಕ್ಕಷ್ಟೇ,,,ಅದಕ್ಕೆ ನಮ್ಮದೊಂದು ಪುಟ್ಟ ಡ್ರಾಮಾ ಟೀಂ ಇದೆ...ಬೆಕ್ಕಿನ ವಿಷಯ ಬಂದಾಗ ......ಹಿತ್ತಲ ಬಾಗಲಲ್ಲಿ ಬೆಕ್ಕನ್ನ ಬಿಟ್ಟು..ಮುಂದಿನ ಪಡಸಾಲೆಯಲ್ಲಿ ಏನು ಗೊತ್ತಿಲ್ಲದವರಂತೆ ಬಂದು ಕೂತು ಬಿಡ್ತೀವಿ..ಬೆಕ್ಕು ಮನೆಗೆ ಬಂದು ಸೇರಿದರೆ ಒಳ್ಳೇದು ಅನ್ನೋ ಒಂದು ನಂಬಿಕೆಯಲ್ಲೇ...ಅಮ್ಮ ಪಾಪ ಅದನ್ನ ಒಲ್ಲದ ಮನಸಲ್ಲೇ ಒಳಗೆ ಸೇರಿಸುತ್ತಾಳೆ ....

ಆಮೇಲೆ ಬೆಕ್ಕಿನ ತಲೆಗೆ ಎಣ್ಣೆ ಸವರಿ ಅಡಿಗೆ ಒಲೆಯ ಸುತ್ತ ೩ ಬಾರಿ ತಿರುಗಿಸಿದರೆ ಆ ದಿನದಿಂದ ಅದು ನಮ್ಮ ಬೆಕ್ಕು...ಹಾಗೆ ಬಂದನಂತರ ಅದಕ್ಕೆ ನಾಮಕರಣ ಸಾಮಾನ್ಯವಾಗಿ ಯಾವ ದಿನ ತಂದಿದ್ದೆವೋ ಆ ವಾರದ ಹೆಸರಿನ ಆರಂಭದ ಅಕ್ಷರ ದಲ್ಲೇ ಹೆಸರಿಡೋದು ನಮ್ಮ ಅಲಿಖಿತ ನಿಯಮ..ಆದ್ರೆ ಈ ಬಾರಿ ಆ ಬೆಕ್ಕಿನ ಮರಿಯ ಅದಾ,ನಜಾಕತ್, ನೋಡಿ ಅದಕ್ಕೆ ಐಶ್ವರ್ಯ  ಅನ್ನೋ ಹೆಸರಿಟ್ವಿ...

ಹಾಗೆ ಬಂದು ಸೇರಿದ ಬಿಲ್ಲಿ ನಮ್ಮ ಮನೆಯ ಎಲ್ಲರ ಮುದ್ದು...ಆಕೆಯನ್ನ ಹೇಗೆ ಮುದ್ದೆ ಮಡಿ ಹೇಗೆ ತಿರುಚಿ ಮಲಗಿಸಿದರು ಆಕೆ ಅದೇ ಆಕಾರ ದಲ್ಲಿ ಮಲಗಿರುತ್ತಿದ್ದಳು..ಮೈ ಶಾಖ್,ಅಡುಗೆ ಒಲೆಯ ಹಿಂದಿನ ಬಿಸಿಗೆ ಮಲಗುವುದೆಂದ್ರೆ ಅದಕ್ಕೆ ಪ್ರಾಣ...
ದಿನಕಳೆದಂತೆ ಇನ್ನು ಚಂದ ಇನ್ನು ಆಕರ್ಷಣೀಯವಾಗಿ ಕಾಣೋ ಆಕೆಯ ಹೊಟ್ಟೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಬಂತು...ನಮಗೆಲ್ಲ ಖುಷಿ ,,,,,ಮುದ್ದಿನ ಮಗಳು ಬಾಣಂತನಕ್ಕೆ ಬಂದಂತೆ..
ಬೆಕ್ಕುಗಳು ಕತ್ತಲಲ್ಲೇ ಮರಿ ಹಾಕುತ್ತವೆ..ಹಾಕಿದ ಮೊದಲಮರಿ ತಿಂದುಹಾಕುತ್ತವೆ,೭ ಜಾಗೆ ಬದಲಿಸುತ್ತವೆ...ಹೀಗೆ ಏನೇನೋ ನಂಬಿಕೆಗಳಿವೆ...ಬೆಕ್ಕಿನ ಬಗ್ಗೆ .....ಆದರೆ ಅದೆಲ್ಲ ಸುಳ್ಳು..ಅನ್ನೋದು ನಂಗೆ ಮನವರಿಕೆ ಮಾಡಿಕೊಟ್ಟಿದ್ದೆ ಐಶ್ವರ್ಯ ...

ಆದಿನ ನಮ್ಮ ಹಳೆಮನೆ ಮೂಲೆ ಕೋಣೆಯಲ್ಲಿ ಓದುತ್ತ ಕುಳಿತಿದ್ದೆ...ಐಶು ಬಂದು ನನ್ ಕಾಲ್ ಮೇಲೆ ಮಲಗಿತು ಅದು ಯಾವತ್ತಿನ ರೂಡಿ..ಆದರೆ ಇವತ್ತು ಪ್ರತಿದಿನದಂತಲ್ಲ ಏನೋ  ಹೇಳೋರ್ ಥರ ಪುಸ್ತಕ ವನ್ನ ಪರಚೋದು ..ಕಾಲುಒಮ್ಮೆಲೇ ನೆಟ್ಟಗೆ ಮಾಡಿಒದರೋದು..ಹಾಗೆಲ್ಲ ಮಾಡೋಕೆ ಶುರು ಮಾಡಿತು..

ಅದು ಮಾಡ್ತಿರೋದ್ ನೋಡಿದ್ರೆ ಅನಿಸ್ತಿತ್ತು ಅದಕ್ಕೆ ಹೊಟ್ಟೆನೋವು ಬಂದಿದೆ ....ಮರಿ ಹಾಕಲು ಅದಕೆ ಕತ್ತಲೆ ಬೇಕಲ್ಲ ??ನ ಎದ್ದು ಹೋಗಿ ಬಿಡಲ..ಅನ್ನೋ ಯೋಚನೆ ಬಂತಾದರೂ..ನನ್ನ ಮೈ ಮೇಲಂತೂ ಮರಿ ಹಾಕಲ್ಲ ಅನ್ನೋ ಒಂದು ವಿಶ್ವಾಸ ದೊಂದಿಗೆ ಅದನ್ನ ತೊಡೆಯಮೇಲೆ
ಮಲಗಿಸಿ ಕೊಂಡು ಸುಮ್ಮನೆ ಅದರ ತಲೆ ಹೊಟ್ಟೆ ಕೊರಳನ್ನ ಸವರುತ್ತ ಕುಳಿತೆ ....
ನನ್ನ ಅರಿವಿಗೆ  ಬರೋ ಮುಂಚೆಯೇ  ನನ್ನ ತೊಡೆಮೇಲೆ ಬಿಲ್ಲಿ ಮರಿ ಹಾಕಿಬಿಟ್ಟಿತ್ತು...ಆ ಅನುಭವ ಎಲ್ಲರಿಗು ಸಿಗಲ್ಲ...ಕೆಲವರಿಗೆ ಹೇಸಿಗೆ ,ಕೆಲವರಿಗೆ ಅಯ್ಯೋ ರಾಮ್ ರಾಮನ ನೆನಪು....ಕೆಲವರಿಗೆ ನನ್ ಡ್ರೆಸ್ ಚಿಂತೆ ,,,,,ಆದ್ರೆ ನನಗೆ ಆ ಅನುಭವ ಎಷ್ಟು ರೋಮಾಂಚನ ತಂದಿತ್ತು ಅಂದ್ರೆ ಮುಂದಿನ ೩ ಮರಿಗಳು ಅದು ನನ್ ತೊಡೆಮೇಲೆ ಹಾಕಿ..ಕೆಳಗೆ ನಿಂತು ಹೊಕ್ಕಳಬಳ್ಳಿ ತನ್ನ ಹಲ್ಲಿನಿಂದ ತುಂಡು ಮಾಡಿ ಮತ್ತೆ     ತೊಡೆಮೇಲೆ ಬಂದು ಮಲಗ್ತಿತ್ತಾದ್ರು ..ನಾನು ಬಾರಿ ಅದು ಹುಡುಗಿ ಯಿಂದ ಅಮ್ಮ ಆಗಿ ಪರಿವರ್ತನೆ ಗೊಂಡ ರೀತಿ...ಅದನ್ನ ನಿರ್ವ್ಹಹಿಸೋ ಪರಿ ಕಂಡು ಮಾತೆ ನಿಂತು ಹೋದಂತಾಗಿದ್ದೆ ......

ಅದಕ್ಕೆ ಯಾರು ಹೇಳಿಕೊಟ್ಟರು??ಕಣ್ಣು ಬಿಡದ ಆ ಮರಿಗಳನ್ನು ತನ್ನ ಮೊಲೆಗೆ ಅಂಟಿಸಿಕೊಂಡು ಹಾಲುಣಿಸುವ ಪರಿ..ಮರಿಯ ಮಯ್ಯಸುತ್ತ ಇರೋ ಜಿಡ್ಡು ನೆಕ್ಕಿ ಅದನ್ನ ಶುಭ್ರ ಗೊಳಿಸೋ ರೀತಿ...ಪ್ರಕೃತಿ ಎಷ್ಟು ಅಧ್ಭುತ ಅಲ್ವಾ??ನನಗನಿಸಿದ ಮಟ್ಟಿಗೆ ಬೆಕ್ಕಿನ ಬಾಣಂತನ ದಷ್ಟು ಸ್ವಚ್ಹ ಶುಭ್ರ   ಮತ್ತ್ಯಾವ ಜೀವಿಯೂ ಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೋ......
ಏನೇ ಹೇಳಿ..ಇದೊಂದು ಜೀವಿತ ಕಾಲದ ಅಮೂಲ್ಯ ಅನುಭವ ...ಅದಕ್ಕೆ ಅಕ್ಷರ ರೂಪ ಕೊಡುವುದು ಕಷ್ಟ್ ಅನಿಸುತ್ತೆ ಆದ್ರೂ..ನೀವು ನನ್ನನ್ನ ಎಂದಾದರು ಭೇಟಿ ಆದ್ರೆ ಅದನ್ನ ಮಾತಲ್ಲಿ ವಿವರಿಸೋ ಪ್ರಯತ್ನ ಖಂಡಿತ ಮಾಡೇನು....
ಅಲ್ಲಾದ್ರೂ ನಾನೆ ಸೋಲ್ತೇನೆ...
ಐಶು ಈಗಿಲ್ಲ...ಆದ್ರೆ ಅವಳ ನೆನೆಪು ನನಗೇ ಹೆರಿಗೆ ನೋವು ಬಂದಾಗ..ತೀವ್ರವಾಗಿ ಕಾಡಿತ್ತು...ಹೀಗಿತ್ತು ನನ್  ಬೆಕ್ಕಿನ ಬಾಣಂತನದ ಕಥೆ..

2 comments:

  1. ಪ್ರಕೃತಿ ವಿಸ್ಮಯಗಳ ಸಂತೆ. ಎಂತಹ ಕನಿಷ್ಟ ಜೀವಿಗಳಿಗೂ ತಮ್ಮ ಆಹಾರ , ರಕ್ಷಣೆ , ಪೀಳಿಗೆಯನ್ನು ಮುಂದುವರೆಸಲು ಬೇಕಾದ ಬುದ್ಧಿ ಇರುತ್ತದೆ. ಅನೇಕ ಜೀವಿಗಳಿಗೆ ಈ ಗುಣಗಳು ಕಲಿಸುವ ಅವ್ಶ್ಯಕತೆಯೆ ಇಲ್ಲದೇ ತಾನಾಗಿ ಬಂದುಬಿಡುತ್ತದೆ.
    ನಿಜಕ್ಕೂ ನಿಮ್ಮದು ಅದ್ಭುತ ಅನುಭವ . ಸಾಮಾನ್ಯವಾಗಿ ಬೆಕ್ಕು ನಾಯಿಯಂತಹ ಪ್ರಾಣಿಗಳು ಮರಿ ಹಾಕಲು ಯಾರು ಇಲ್ಲದ ಸ್ಥಳವನ್ನೇ ಅಯ್ಕೆ ಮಾಡಿಕೊಳ್ಳುತ್ತವೆ . ಆದರೆ ನಿಮ್ಮ ಬೆಕ್ಕು ನಿಮ್ಮ ತೊಡೆ ಮೇಲೆ ಮರಿ ಹಾಕಿದ್ದು ಅದಕ್ಕೆ ನಿಮ್ಮ ಮೇಲಿದ್ದ ಅದಮ್ಯ ಪ್ರೀತಿ ವಿಶ್ವಾಸವನ್ನು ತೋರಿಸುತ್ತದೆ . nice wright up :)

    ReplyDelete