ಪ್ರತಿ ಸೋಮವಾರ ಮಗನ ಶಾಲೆಯಲ್ಲಿ ವಾರಪೂರ್ತಿ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮ,ನಾವು ಕಲಿಸಬೇಕಾದ್ದು ಅವರಿಂದ ಹೇಳಿಸುವುದು...ಮತ್ತಿತರ ವಿಷಯಗಳ ಬಗ್ಗೆ ಒಂದು ನ್ಯೂಸ್ ಲೆಟರ್ ಕೊಡಲಾಗುತ್ತದೆ ಈ ಬಾರಿಯ ಲೆಟರ್ ನಲ್ಲಿದ್ದಿದ್ದು ಹೆಲ್ಲೋವಿನ (Halloween) ಎಂಬ ಆಚರಣೆ ಮತ್ತು ಅದರ ಕುರಿತಾದ ಚಟುವಟಿಕೆಗಳ ಬಗ್ಗೆ , ಹೋದ ವರ್ಷ ನಾನೂ ಹಲ್ಲೋವಿನ್ ದಿನವೇ ಈ ದೇಶಕ್ಕೆ ಬಂದಿದ್ದೆ ಆದ್ದರಿಂದ ಅದರ ಆಚರಣೆ,ಅದರ ಕುರಿತಾದ ಯಾವುದೇ ವಿಷಯ ನನಗೆ ಗೊತ್ತಿರಲಿಲ್ಲ. ಎಂ ಎ ಮೊದಲ ವರ್ಷದಲ್ಲಿ ಜಾಗತಿಕ ಜಾನಪದ ಇತಿಹಾಸ ಓದುವಾಗ ಅಲ್ಲಿ ಈ ಶಬ್ದ ಕೇಳಿದ ನೆನಪು ಬಿಟ್ಟರೆ ಇದರ ಬಗ್ಗೆ ಬೇರೆನೂ ಗೊತ್ತಿರದ ನಾನು ಬರುವ ಶುಕ್ರವಾರ ಹಲೋವಿನ್ ಫ್ಯಾನ್ಸಿ ಡ್ರೆಸ್ ಪಾರ್ಟಿ ಇದೆ ಮಗುವನ್ನು ಸಿದ್ದ ಮಾಡಿ ಕಳಿಸಿ ಎಂದಾಗ , ಏನು ಮಾಡೋದು ಎಂಬ ಗೊಂದಲದಲ್ಲಿದ್ದೆ. ಮಗನ ಟೀಚರ್ ಗೆ ಕೇಳಿದಾಗ ಯಾವುದೇ ಆದೀತು ರಾಕ್ಷಸ ,ಮಾಟಗಾರ,ಸ್ಕೆಲಿಟನ್...ಆಕೆಯ ಲಿಸ್ಟ್ ಮುಂದುವರೆದಿತ್ತು..ನನಗೆ ತಲೆ ಚಕ್ರ ಬರುತಿತ್ತು..ಮಕ್ಕಳಿಗೆ ಸಿಂಗಾರ ಮಾಡುವುದೆಂದರೆ ನನಗೆ ಮೊದಲಿಂದಲೂ ಅದೇನೋ ವೀಪರೀತ ಆಸಕ್ತಿ, ಓಣಿಯ ಮಕ್ಕಳು ಬಂಧುಗಳ ಮಕ್ಕಳು ಮನೇ ಪಕ್ಕದ ಖಾಲಿ ಜಾಗೆಯಲ್ಲಿ..ಟೆಂಟ ಕಟ್ಟಿಕೊಂಡ ಅಲೆಮಾರಿಗಳ ಮಕ್ಕಳು ಯಾರಾದರೂ ಆದೀತು..ಅವರನ್ನು ಕರೆದು ತರ ತರದ ವೇಷ ಮಾಡಿ ಫೋಟೋ ತೆಗೆದಿಡುತ್ತಿದ್ದೆ,
ನನ್ನ ಮಗನಿಗೂ ಇವನ್ನೆಲ್ಲ ಪ್ರಯೋಗಿಸಿದ್ದೆನಾದರು..ಕೃಷ್ಣ , ಬುದ್ಹ, ರಾಮ, ಶಕುಂತಲೆ.ಶಂಕರಾಚಾರ್ಯ ಬಿಟ್ಟರೆ , ದೆವ್ವದ ವೇಷ ಹಾಕುವ ಧೈರ್ಯ ಮಾಡಿರಲಿಲ್ಲ. ..ಈಗ ಶಾಲೆಯಲ್ಲೇ ಹೇಳಿದ್ದಾರೆ ಅಂದ ಮೇಲೆ ಮಾಡಲೇಬೇಕಲ್ಲ ಸರಿ ಆದರೆ ಇವರು ಬೇರೆಲ್ಲ ಬಿಟ್ಟು ಭಯಾನಕ ವೇಷಗಳನ್ನು ಈ ಹಬ್ಬದಲ್ಲಿ ಹಾಕೊದ್ಯಾಕೆ ಅನ್ನೋದು ನನ್ನ ಪ್ರಶ್ನೆ ಆಗಿತ್ತು ಮತ್ತೆ ಕೇಳಬೇಕೆ..???ಶುರು ಆಯ್ತು..ತನಿಖೆ ಹಲೋವಿನ ಬಗ್ಗೆ

ಹಲ್ಲೋವಿನ್ ಎಂಬುದು ಮೂಲತ ಸ್ಕಾಟಿಷ್ ,ಮತ್ತು ಐರಿಶ್ ನಾಡಿನ ಆಚರಣೆ ( ಸೆಲ್ಟಿಕ್ ) ಇಲ್ಲಿಯ ಜನರು ವಿಶ್ವದ ವಿವಿಧ ಭಾಗಗಳಿಗೆ ವಲಸೆ ಹೋದಂತೆ ಹಲೋವಿನ್ ಅಮೇರಿಕ ,ಕೆನಡಾ , ಆಸ್ಟ್ರೇಲಿಯ ದೇಶಗಳಿಗೂ ಪಸರಿಸಿ ಅಲ್ಲಿಯದೇ ಆಚರಣೆಯಾಗಿ ಹೋಯಿತು .
ಸೆಲ್ಟಿಕ್ ಸಂಸ್ಕೃತಿಯಲ್ಲಿ ಹಲ್ಲೋವಿನ್ ಅನ್ನು ಸಃ-ವಿನ್ ಎಂದು ಕರೆಯಲಾಗಿದೆ.ಪುರಾತನ ಕಾಲದಲ್ಲಿ ಸಃ- ವಿನ್ ಹಬ್ಬವನ್ನು ಚಳಿಗಾಲದ ಆಗಮನ ಮತ್ತು ಆಟಂ ತಿಂಗಳ ಅಂತ್ಯ, ಮತ್ತು ಚಳಿಗಾಲಕ್ಕೆ ಬೇಕಾಗುವ ಎಲ್ಲಾ ಥರದ ವಸ್ತುಗಳನ್ನು ಸಂಗ್ರಹಿಸಿಡುವ ಪ್ರಕ್ರಿಯೆಯ ದ್ಯೋತಕವಾಗಿ ಆಚರಿಸಲಾಗುತ್ತಿತ್ತು. ಇದೆ ಸಂದರ್ಭದಲ್ಲಿ ಸತ್ತುಹೊದವರ ಆತ್ಮಗಳು ಮತ್ತೆ ಭೂಮಿಗೆ ಬರುತ್ತವೆ ಎಂಬ ನಂಬಿಕೆ ಇದೆ ಇವರಲ್ಲಿ ಇದೆ (ನಮ್ಮಲ್ಲಿನ ಪಿತೃ ಪಕ್ಷ ಮಹಾಲಯ ಅಮಾವಾಸ್ಯೆಯಂತೆ)..ಆ ಕಾರಣಕ್ಕೆ..ಭಯಾನಕ ವೇಷಗಳನ್ನು ಧರಿಸಿ..ಅವುಗಳನ್ನು ಅಣಕಿಸುವ ಮತ್ತು ಪಟಾಕಿ ಸಿಡಿಸುವ ಮೂಲಕ ಬೆಳಕನ್ನು ಹೊಮ್ಮಿಸಿ ಅವನ್ನು ಆಕರ್ಷಿಸುವ , ಅವು ಯಾರಿಗೂ ತೊಂದರೆ ಮಾಡದೆ ಮತ್ತೆ ತಮ್ಮ ಲೋಕಕ್ಕೆ ಮರಳಲಿ ಎಂಬ ಆಶಯ ಈ ಆಚರಣೆಯ ಹಿನ್ನೆಲೆಯಲ್ಲಿದೆ

ಜೊತೆಗೆ ಅಕ್ಟೋಬರ್ ತಿಂಗಳ ಕೊನೆ ದಿನ ವಿಚಿತ್ರ ವೇಷ ತೊಟ್ಟ ಮಕ್ಕಳು..ಮನೆಯಿಂದ ಮನೆಗೆ ಭೇಟಿ ಕೊಡುತ್ತವೆ(ಸಂಕ್ರಮಣದ ಎಳ್ಳು ಹಂಚೋಕೆ ಮನೆಮನೆಗೆ ಹೋಗುವಂತೆ ...)..ಮತ್ತು ಮನೆಯ ಯಜಮಾನನಿಗೆ '' ಟ್ರಿಕ್ ಆರ್ ಟ್ರೀಟ್ ''ಎನ್ನುತ್ತವೆ , ಮನೆಯವರು ಅವರಿಗೆ ಯಾವುದೇ ಸಿಹಿ ಅಥವಾ ತಿಂಡಿ ಕೊಡುತ್ತಾರೆ..ಆಗ ಮಕ್ಕಳು ಅವರ ಮುಂದೆ ಒಂದು ಕಥೆಯನ್ನೋ ಹಾಡನ್ನೂ ಹೇಳಿ..ತಮ್ಮ ಟ್ರೀಟ್ ಪಡೆದು ಕೊಳ್ಳುತ್ತವೆ.. ಕೊಡದಿದ್ದರೆ ಅವರಿಗೆ ಸಂಬಂಧ ಪಟ್ಟ ಯಾವುದೇ ವಸ್ತುವನ್ನು ಅವರು ಹಾನಿ ಗೊಳಿಸುವ ಅಥವ ತೊಂದರೆ ಕೊಡುವ ಟ್ರಿಕ್ ಮಾಡುತ್ತಾರೆ ಇಲ್ಲಿಯ ಎಲ್ಲರಿಗು ಈ ಆಚರಣೆ ತಿಳಿದಿರುವುದರಿಂದ ಯಾರು ಟ್ರಿಕ್ ಗೆ ಗುರಿ ಆಗುವುದಿಲ್ಲ ಅವಕ್ಕೆಲ್ಲ ನಾವಿದ್ದೇವಲ್ಲ!!!!!!ನಾನು ಇಲ್ಲಿ ಬಂದ ದಿನವೇ ಹಲೋವಿನ್ ಆ ದಿನ ನಮ್ಮ ಮನೆಯ ಕಿಟಕಿಯ ಮೇಲೆ ಮೊಟ್ಟೆ ಹೊಡೆದು..ಪೋಸ್ಟ್ ಬಾಕ್ಸ್ ನಲ್ಲಿ ಪಟಾಕಿ ಸಿಡಿಸಿ..ಸುಮಾರು ತೊಂದ್ರೆ ಕೊಟ್ಟಿದ್ದವು ಮಕ್ಕಳು..
ಈ ದಿನದ ಮತ್ತೊಂದು ವಿಶೇಷ ನಮ್ಮಲ್ಲಿ ದೀಪಾವಳಿಗೆ ನಕ್ಷತ್ರ ಬುಟ್ಟಿ ತೂಗು ಹಾಕುವಂತೆ..ಕುಂಬಳ ಕಾಯಿಗೆ ಕಾರ್ವಿಂಗ್ ಮಾಡಿ ಮನೇ ಮುಂದೆ ಇಡಲಾಗುತ್ತದೆ..ಜೊತೆಗೆ ಮನೆಯ ಕಿಟಕಿ ಮೇಲೆ..ಬಾಗಿಲ ಮೇಲೆ haunted ಎದು ಬರೆಯಲಾಗುತ್ತದೆ ನಾವು ಗದ್ದೆ ಯಲ್ಲಿ ಬೇರ್ಚು ನಿಲ್ಲಿಸುವಂತೆ ಇಲ್ಲಿ ಕೂಡ ಮನೆಯ ಮಾಡಿಗೆ ದೆವ್ವದ ಮುಖವಿರುವ ಒಂದು ಗೊಂಬೆ ತೂಗಿ ಬಿಡುತ್ತಾರೆ(. ನನಗೆ ಇದನ್ನು ನೋಡಿದಾಗ ನೆನಪಾಗಿದ್ದು, ಯಾವುದೊ ಒಂದು ಕಥೆ ಕೇಳಿ ಒಂದಷ್ಟು ದಿನಗಳ ಕಾಲ ನಮ್ಮ ಬಾಗಿಲುಗಳ ಮೇಲೆ ''ನಾಳೆ ಬಾ ''ಅಂದು ಬರೆದು ರಾತ್ರಿ ದೆವ್ವದ ಹಾದಿ ನೋಡಿದ್ದು , ನೆನೆಸಿ ಕೊಂಡರೆ ಇಗಲೂ ನಗು ಬರುತ್ತದೆ)
.ಮತ್ತು ಈ ದಿನ ಮಕ್ಕಳಿಗೆ ಹಲವಾರು ಆಟಗಳನ್ನು..ಛದ್ಮವೇಷ ಸ್ಪರ್ಧೆಗಳನ್ನು ಆಯೋಜಿಸಿರುತ್ತಾರೆ. ಆಪಲ್ ಬಬ್ಲಿಂಗ್ ಎಂಬ ಆಟ ವಿಶೇಷವಾದದ್ದು. ಹಲ್ಲೋವಿನ ಕುರಿತಾದ ಹಲವು ಚಟುವಟಿಕೆಗಳನ್ನು ವಾರಪೂರ್ತಿ ಶಾಲೆಗಳಲ್ಲಿ ಮಾಡಿಸಲಾಗುತ್ತದೆ..
ಜೊತೆಗೆ ಈದಿನ ಅವಿವಾಹಿತ ಯುವತಿ ರಾತ್ರಿ ಕತ್ತಲಲ್ಲಿ ಮೇಣದ ಬತ್ತಿಯೊಂದಿಗೆ ಕನ್ನಡಿಯ ಮುಂದೆ ನಿಂತರೆ ಅವಳಿಗೆ ತನ್ನ ವರನ ಮುಖ ಗೋಚರವಾಗುತ್ತದೆ ಎಂಬ ವಿಚಿತ್ರ ನಂಬಿಕೆಯೂ ಈ ಮಂದಿಯಲ್ಲಿದೆ.
ಹಲ್ಲೋವಿನ್ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸುವ ಸಿಹಿ...'' ಕ್ಯಾಂಡಿ ಆಪಲ್'' .ಸೇಬನ್ನು ಚಾಕಲೇಟ್ ಪಾಕದಲ್ಲಿ ಅದ್ದಿ ಅದಕ್ಕೊಂದಿಷ್ಟು ಸಕ್ಕತೆಯ ಹರಳು ಹಾಕಿ ಅಥವಾ ಸಕ್ಕರೆಯ ಪಾಕದಲ್ಲಿ ಅದ್ದಿ ಮಾಡಿದ ಸಿಹಿ ಯೇ ಕ್ಯಾಂಡಿ ಆಪಲ್ .
ಇದನ್ನು ಪ್ರತಿ ಶಾಲೆಯಲ್ಲಿ ಪುಟ್ಟ ಮಕ್ಕಳ ಕೈಯ್ಯಲ್ಲೂ ಮಾಡಿಸುತ್ತಾರೆ..ನನಗೆ ತುಂಬಾ ಇಷ್ಟವಾದ ಸಂಗತಿಯೆಂದರೆ ಇಲ್ಲಿನ ಪ್ರತಿ ಜಾನಪದ ಆಚರಣೆ..ಮತ್ತು ಅದರ ಅರ್ಥ ಅದರ ಹಿನ್ನೆಲೆಯನ್ನು ಮಕ್ಕಳಿಗೆ ಶಾಲೆಯಲ್ಲಿ ವಿವರಿಸಿ ಅದನ್ನು ಮುಂದುವರಿಸಿಕೊಂಡು ಹೋಗಲು ಪ್ರೇರೇಪಿಸಲಾಗುತ್ತದೆ .ಅದರ ಬಗ್ಗೆ ಆಸಕ್ತಿ ಹುಟ್ಟಿಸುವ ಕೆಲಸ ತುಂಬು ಮನದಿಂದ ಮಾಡುವ ಶಿಕ್ಷಕ ವೃಂದ ಅಭಿನಂದನೀಯ . ಸಂಸ್ಕೃತಿ ಯಾವುದಾದರೇನು ಅಲ್ಲಿಯ ಒಳಿತುಗಳನ್ನು ಅರಿತುಕೊಳ್ಳುವ ಮತ್ತು ಸ್ವಾಗತಿಸುವ, ಜೊತೆಗೆ ನಮ್ಮ ಸಂಸ್ಕೃತಿಯ ಬಗ್ಗೆ ಒಲುಮೆ ಉಳಿಸಿಕೊಂಡು ಅದನ್ನು ಶ್ರದ್ಹೆಯಿಂದ ಆಚರಿಸುವ ಮನಸ್ಸು ಎಲ್ಲರಲ್ಲಿರಬೇಕು .

ನನ್ನ ಮಗ ಇವತ್ತು ದೆವ್ವದ ವೇಷ ತೊಟ್ಟು ಶಾಲೆಗೆ ಹೋದ..ನನಗೆ ಒಳಗೊಳಗೇ ನಗು.ನಕ್ಕರೆ ಅವ ತಾನು ಇದನ್ನು ತೊಡಲ್ಲ ಅಂತಾನೆ ಅಂತ ಗೊತ್ತಿದ್ದಕ್ಕೆ ಸುಮ್ಮನೆ '' ಭಾಳ ಚಂದ ಕಾಂತೀಯ ಗುಂಡ'' ..ಅಂದು ಕಳಿಸಿದೆ..ಇವನ ಫ್ಯಾನ್ಸಿ ಡ್ರೆಸ್ ಡೇ ನಿಮಿತ್ಯ ,ಅದೆಷ್ಟು ಚಂದದ,,ಜನಪದ ಆಚರಣೆಯೊಂದನ್ನು ತಿಳಿಯುವಂತಾಯಿತು..ಥ್ಯಾಂಕ್ಸ್ ಟು..ಪ್ರಥಮ್.
೨೦೧೫ ರ ಹಲೋವೀನ್ ಉಡುಗೆ . |