.
ನೊರ್ದ್ರರ್ನ್ ಐರ್ಲೆಂಡ್ ಗೆ ಬಂದ ನಂತರ..ಎಲ್ಲೆಡೆ ಹಸಿರು ಶುದ್ಧ ಪರಿಸರ ಕಾಣ ಸಿಗುತಿತ್ತು ಆದೆರೆ ...ಇಲ್ಲಿ ಅಷ್ಟು ದಟ್ಟ ಕಾಡು ಎಲ್ಲಿರುತ್ತೆ ಎಂಬ ಪ್ರಶ್ನೆ ಮನದಲ್ಲಿದ್ದುದು ಸುಳ್ಳಲ್ಲ...ಜುಲೈ ಅಗಸ್ಟ್ ತಿಂಗಳು ಇಲ್ಲಿ ಬೇಸಿಗೆ..ಎಲ್ಲರೂ ತಿರುಗಾಟದ ಮೂಡ್ನಲ್ಲಿರುತ್ತಾರೆ..ನಾವು ಎಲ್ಲಾದರೂ ಹೋಗಬೇಕಲ್ಲ..ಅಂದು ಇಂಟರ್ನೆಟ್ ತಡಕಾಡಿ ಹುಡುಕಿ ತೆಗೆದಿದ್ದು ''ಟೊಲಿಮೊರ್ ಪಾರ್ಕ್''ಎಂಬ ಸ್ಥಳ ..ಹತ್ತಿರ ಇತ್ತಾದ್ದರಿಂದ ಒಂದೇ ದಿನದಲ್ಲಿ ಹಿಂದಿರುಗಲು ಅನುಕೂಲ ಎಂಬ ಕಾರಣದಿಂದ ನಾವು ಅಲ್ಲಿ ಹೊರಟಿದ್ದೆವು..ಪಾರ್ಕ್ ಎಂಬುದು ಕೇಳಿದ ಕೂಡಲೇ ಮಕ್ಕಳು ಆಡುವಂತ ಸ್ಥಳ ಅಂದುಕೊಂಡಿದ್ದು ಆಗಿತ್ತೆನ್ನಿ...ಎಲ್ಲಾ ಪೂರ್ವಾಗ್ರಹದೊಂದಿಗೆ ನಾವು ಹೊರಟಿದ್ದು ನೊರ್ದ್ರರ್ನ್ ಐರ್ಲೆಂಡ್ ನಾ ಮೊದಲ ಅರಣ್ಯಉದ್ಯಾನ ಟೊಲಿಮೊರ ಪಾರ್ಕ್ ಗೆ...
ಟೊಲಿಮೊರ ಪಾರ್ಕ್
ಕಲ್ಲಿನ ಮಾಹದ್ವಾರದ ಮೇಲೆ ಕೆತ್ತಿದ ೧೭೮೬ ಎಂಬುದನ್ನು ನೋಡಿಯೇ ಇದು ಬಹು ಪುರಾತನ ಐತಿಹಾಸಿಕ ಸ್ಥಳ ಎಂಬುದು ಮನದಟ್ಟಾಗಿತ್ತು.ದ್ವಾರದ ಒಳಗೆ ಹೆಜ್ಜೆ ಇಟ್ಟಂತೆ ನಾವು ಎಲ್ಲಿ ಇದ್ದಿವೆ ಅನ್ನೋದನ್ನು ಮರೆಸಿ ಬಿಡುವ ಪ್ರಕೃತಿ ಸಿರಿ..ಹಸಿರು..ತಿಳಿ ಹಸಿರು,ಕಡು ಹಸಿರು ಗಿಳಿ ಹಸಿರು,ಕೆಂಪು ಹಸಿರು ಹಸಿರು ಹಸಿರು........ಎದುರಿನಲ್ಲೇ ಅರಣ್ಯ ಇಲಾಖೆಯ ಪುಟ್ಟ ಕುಟೀರ ...ಅಲ್ಲಿ ಅರಣ್ಯದ ನಕ್ಷೆ ತೆಗೆದುಕೊಂಡು...ನಾವು ಹೊರಟೆವು...ನಿರ್ದಿಷ್ಟ ಪಡಿಸಿದ ಕೆಲವು ಜಾಗೆಗಳಲ್ಲಿ...ಅಲೆಮಾರಿಗಳು ಕಟ್ಟಿ ಕೊಳ್ಳುವಂಥ ಟೆಂಟ್.ಮತ್ತು ಕಾರವನ್ ಗಳು...ಆಹಾರ ಸಾಮಗ್ರಿ..ಪಾನೀಯ ಏನೊಂದು ಇಲ್ಲಿ ಸಿಗುವುದಿಲ್ಲವಾದ್ದರಿಂದ..ಎಲ್ಲರು ತಮ್ಮ ಅಡಿಗೆಗೆ ಬೇಕಾದ ಇಂಧನ ವನ್ನು ಹೊತ್ತು ತಂದಿದ್ದು ಕಾಣುತ್ತಿತ್ತು....ಅದೆಷ್ಟು ಜನ..ಇದ್ದರು ಅಲ್ಲಿ ಆದರೂ ಒಂಚೂರು ಗದ್ದಲವಿಲ್ಲ...ಪ್ರಕೃತಿ ಮಾತೆಯ ಮಂಪರು ಮಾಯವಾಗುವುದೋ ಅನ್ನುವ ಆತಂಕ ವೆ??..ಅಥವಾ ಆ ಮೌನದಲ್ಲೇ ಅವರು ಅಲ್ಲಿಯ ಆನಂದ ಸವಿಯುತ್ತಿದ್ದರೆ????ಗೊತ್ತಿಲ್ಲ..
ಇತಿಹಾಸ
೧೬೧೧ ರಲ್ಲಿ ಮಗನ್ನಿಸ್ ಎಂಬ ಕುಟುಂಬದ ಒಡೆತನದಿಂದ ಇದರ ಇತಿಹಾಸ ಆರಂಭವಾಗುತ್ತದೆ ,ಇದು ೧೭೮೬ ರ ತನಕವೂ ದಾಯದಿಗಳಲ್ಲೇ ಹಸ್ತಾನ್ತರಿಸಲ್ಪಡುತ್ತದೆ ,ನಾನು ಗಮನಿಸಿದ ಒಂದು ವಿಷಯವೆಂದರೆ ಯಾರೇ ಇದರ ಒಡೆತನಕ್ಕೆ ಬಂದಿರಲಿ ಒಂದೇ ಅವರು ಮದುವೆ ಆಗುವುದಿಲ್ಲ ,ಆದವರಿಗೆ ಮಕ್ಕಳಗುವುದಿಲ್ಲ ಮತ್ತು ಆಸ್ತಿ ಸೋದರಿಯ ಸಂತಾನಗಳಿಗೆ ಪರಾಭಾರೆ ಆಗುತ್ತದೆ ಇದು ಆ ಸ್ಥಳ ಮಹಿಮೆಯೋ ಏನೋ .
ಟೈಟಾನಿಕ್ ಹಡಗಿನ ಹೆಸರನ್ನು ಕೇಳದವರ್ಯಾರು ಆ ಹಡಗಿನ ನಿರ್ಮಾಣಕ್ಕೆ ಕಟ್ಟಿಗೆ ಒದಗಿಸಿದ್ದು ಇದೇ ಟೋಲೀಮೊರೆ ಅರಣ್ಯ,ಇಲ್ಲಿದ್ದ ಒಂದು ಅರಮನೆಯಲ್ಲಿ ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಅಮೇರಿಕನ್ ಸೈನಿಕರು ಉಳಿದು ಕೊಂಡಿದ್ದರು ಆದರೆ ಆ ಸುಂದರ ಕಟ್ಟಡ ಈಗ ನೆಲಸಮ ಮಾಡಲಾಗಿದೆ , ೧೯೩೦ ರಲ್ಲಿ ಅರಣ್ಯ ಇಲಾಖೆಯವರಿಗೆ ಈ ಅರಣ್ಯದ ಮೇಲ್ವಿಚಾರಣೆ ವಹಿಸಿದ ನಂತರ ನಿರಂತರ ಬೆಳವಣಿಗೆ ಕಂಡ ಇದನ್ನು ೧೯೫೫ ರಲ್ಲಿ ಐರ್ಲನ್ದ ನ ಮೊದಲ ಅರನ್ಯೋದ್ಯಾನ ಎಂದು ಘೋಷಿಸಲಾಯಿತು
ವಿಶೇಷ
ಇದೊಂದೇ ಅರಣ್ಯ ಆದರೆ ಇಲ್ಲಿಂದ ಕಾಣುವ ದೃಶ್ಯಗಳು ಐದಾರು ಭಿನ್ನ ಭಿನ್ನ ಪ್ರದೇಶದ ಅನುಭವ ನೀಡುತ್ತವೆ. ಶಿಮ್ನಾ ಮತ್ತು ಸ್ಪಿಂಕ್ವೀ ನದಿಗಳು ಈ ಅರಣ್ಯದಲ್ಲಿ ಸಂಗಮ ಗೊಳ್ಳುತ್ತವೆ.ಮತ್ತು ಈ ನದಿಗಳು ಸಾಲಮನ್ ರುಚಿಯಾದ ಮೀನಿನ ಆಗರಗಳು ,ಕಾಡನ್ನು ಎರಡು ಭಾಗಗಳಾಗಿ ವಿಭಾಗಿಸಿದ ಈ ನದಿಗಳಿಂದಲೇ ಹುಟ್ಟಿಕೊಂಡ ಮತ್ತೊಂದು ಆಕರ್ಷಣೆ ಇಲ್ಲಿರುವ ಸೇತುವೆಗಳು ,ಅರಣ್ಯದಲ್ಲಿ ಒಟ್ಟು ೧೬ ಸೇತುವೆಗಳು ಒಂದೊಂದು ತಮ್ಮ ಹಿಂದೊಂದು ಕತೆಯನ್ನು ಹರವಿಕೊಂಡು ಕುಳಿತಿವೆ..ಕೆಲವು ಕಲ್ಲಿನ ಸೇತುವೆಗಳು ಕೆಲವು ತೂಗು ಸೇತುವೆ ,ಮತ್ತೆ ಕೆಲವು ಕಟ್ಟಿಗೆಯವು .
ಹರ್ಮಿಟೆಜ್ ಇದರಲ್ಲಿ ಮುಖ್ಯವಾದುದು ಈ ಸೇತುವೆಯ ಪಕ್ಕ ಒಂದು ಸುಂದರ ಕಲ್ಲಿನ ಸೂರು ಇದೆ,ಆಗ ಇಲ್ಲಿ ವಾಸಿಸುತ್ತಿದ್ದ ಜೇಮ್ಸ್ ಹಮಿಲ್ತನ್ ವಿರಾಮಸಮಯದಲ್ಲಿ ಇಲ್ಲಿ ಮೀನು ಹಿಡಿಯಲು ಬರುತ್ತಿದ್ದರು ಮತ್ತು ಅವರ ಪತ್ನಿ ಸ್ನೇಹಿತೆಯರು ಈ ಕಲ್ಲಿನ ಸೂರಿನಡಿಯಲ್ಲಿ ಕಸೂತಿ ಮಾಡುತ್ತ ,ಹರಟೆ ಹೊಡೆಯುತ್ತ ಪ್ರಕೃತಿ ಸೌಂದರ್ಯ ಆಸ್ವಾಧಿಸುತ್ತಿದ್ದರು,ಈ ಕಾರಣಕ್ಕೆ ಈ ಸೇತುವೆ ಈ ಕಲ್ಲಿನ ಸೂರನ್ನು ಕತ್ತಲಾಗಿತ್ತು ಎಂಬುದು ಇತಿಹಾಸದಿಂದ ತಿಳಿದ ವಿಷಯ ನಡು ನಡುವೆ ನದಿಯ ನಡುವೆ ಚಂದದ ಕಲ್ಲುಗಳನ್ನು ಜೋಡಿಸಿ ನೀರು ಕಡಿಮೆ ಇದ್ದಕಡೆ ನಡಿಗೆಯಲ್ಲೇ ನದಿಯನ್ನು ದಾಟಬಹುದಾದ ಚಂದದ ವಿನ್ಯಾಸ ಕೂಡ , ನಮ್ಮದು ಭಾರತೀಯ ಮನಸ್ಸು ಆ ಸುಂದರ ತೀಳಿನೀರನ್ನು ಕಂಡ ಮೇಲೆ ಕೊನೆಪಕ್ಷ ಕಾಲು ಮುಳುಗಿಸಿ ಸ್ವಲ್ಪ ಆಟ ಆಡಿ ಬರೋಣ ಅನ್ನಿಸಿತು..ನೀರಲ್ಲಿ ಕಾಲಿಟ್ಟರೆ ಅಲ್ಲೇ ಫ್ರೀಜ್ ಆಗಿ ಹೋದೇನೋ ಎಂಬ ಭಾವ ಬಂದಿದ್ದು ಸುಳ್ಳಲ್ಲ ಅಷ್ಟು ತಂಪು..
ದ್ವಾರ ದಿಂದಲೇ ಕಾಣುವ ಮೌರ್ನ್ ಪರ್ವತ ಶೃಂಗಗಳ ವಿಹಂಗಮ ನೋಟ , ಚಾರಣ ಮಾಡಿದರೆ ಪರ್ವತದ ತುದಿಯಿಂದ ಕಾಣುವ ಅಟ್ಲಾಂಟಿಕ್ ಸಾಗರ ಸನ್ನಿಧಿ ,ಪರ್ವತವೇರಿದ ಆಯಾಸವನ್ನು ತಣಿಸುತ್ತದೆ ,
ಕಾಡಿನ ತುಂಬಾ ಹಲವು ಅಪರೂಪದ ಜೀವವೈವಿದ್ಯಗಳಿವೆ ಕೆಂಪು ಅಳಿಲು ಅವುಗಲ್ಲೊಂದು ,
ನಡೆದಷ್ಟು ಕಾಡು ,ನೋಡಿದಷ್ಟು ನೀರು ,ಮೌನ ದಲ್ಲಿ ಜೀಗುತ್ಟುವ ಹಲವು ಕೀಟಗಳ ಸಂಗೀತ..ಮುಗಿಲನ್ನು ಮುಟ್ಟುವ ಓಕ್ ಮರಗಳು , ಹಸಿವು ನೀರಡಿಕೆ ಎಲ್ಲವನ್ನು ಮರೆಸುತ್ತವೆ, ಪ್ರತಿ ರುತುವಿನಲ್ಲು ತನ್ನ ರೂಪವನ್ನು ಬದಲಿಸಿಕೊಳ್ಳುತ್ತದೆ ,ಒಮ್ಮೆ ಹಳದಿ ಎಲೆಗಳಿಂದ ಕೂಡಿದ ಕಾದು ಕಂಡರೆ ಮತ್ತೊಮ್ಮೆ ಬಾರಿ ಚಿಗುರು ಕೆಂಪು ,ತಿಳಿ ನೀರು ಅಲ್ಲಲ್ಲಿ ಪುಟ್ಟ ಪುಟ್ಟ ಜಲಪಾತ ನಿರ್ಮಿಸುತ್ತಾ ನಡೆಯುವ ಶಿಮ್ನಾ -ಸ್ಪಿಂಕ್ವೀ ನದಿಗಳು . ಎಷ್ಟೋ ವರ್ಷದ ಕನಸನ್ನು ನನಸು ಮಾಡಿದ ಶ್ರೇಯ ಈ ಟೊಲಿಮೊರ ಅರನ್ಯೋದ್ಯಾನಕ್ಕೆ .ನಿ ಮ್ಮ ಯುರೋಪ್ ಪ್ರವಾಸದಲ್ಲಿ ಇದನ್ನು ಸೇರಿಸಿಕೊಳ್ಳಲು ಮರೆಯಬೇಡಿ ,ಹತ್ತಿರದಲ್ಲೇ ಸೈಲೆಂಟ್ ವ್ಯಾಲಿ ,ಟೈಟಾನಿಕ್ ತಯಾರಾದ ಊರು ಬೆಲ್ಫಾಸ್ಟ್ , ನ್ಯೂ ಕ್ಯಾಸಲ್ , ಜಗತ್ತಿನ ಅಧ್ಬುತಗಳಲ್ಲಿ ಒಂದಾದ ಜೈಂಟ್ಸ್ ಕ್ಯಾಸ್ ವೆ ಗಳಿವೆ ,ನನಗಾದ ಸಾರ್ಥಕ ಅನುಭವ ನಿಮಗೂ ಆಗಲಿ...
ಚೆನ್ನಾದ ವಿವರಣೆ ಬರಹ. ಇಲ್ಲಿನ ದೇವಿಮನೆಯನ್ನೇ ಸರಿಯಾಗಿ ನೋಡಿಲ್ಲ. ಇನ್ನು ಅಲ್ಲಿನ ದೇವಿಮನೆ ಯಾವಾಗಲೋ ಗೊತ್ತಿಲ್ಲ :) .
ReplyDeleteಧನ್ಯವಾದಗಳು.
ReplyDelete