ಮರುದಿನ ಮುಂಜಾನೆ ಮತ್ತೆ ನಮ್ಮ ವೀಕ್ಷಣೆ ಆರಂಭ ಆಯಿತು...ಅಮ್ಮ ನನಗಿಂತ ಮುಂಚೆ ಏಳ್ತಾಳೆ ಅದಕ್ಕೆ ಮುಂದಿನ ಯಾವ ಸುದ್ದಿ ಇದ್ದರು ಆಕೆ ಕಡೆ ಇಂದಾನೆ ಸಿಗೋದು ನನಗೆ...ಆ ದಿನದಿಂದ ಅದು ನಮ್ಮ ದಿನಚರಿ ಆಯ್ತು..
ಒಂದು ವಾರದೊಳಗೆ ಅಲ್ಲಿ ಬಂದು ಹೋಗೋ ಪುಟ್ಟ ಹಳದಿ ಹೊಟ್ಟೆಯ ಕಂದು ಮೈ ಬಣ್ಣದ ಹಕ್ಕಿ ದಂಪತಿಗಳು ನಮ್ಮ ಕಣ್ಣಿಗೆ ಕಾಣಿಸಿ ಕೊಂಡವು.ಮತ್ತೆರಡು ದಿನ ಬಿಟ್ಟು ಅಮ್ಮ ಮಲಗಿದ ನನ್ನ ಎಬ್ಬಿಸಿ ''ಎರಡು ಮೊಟ್ಟೆ ಹಾಕಿದೆ ನೋಡು ಬಾ,,'' ಅಂದ್ರು ನಾನೂ ಓಡಿದೆ ಪುಟಾಣಿ ಮೊಟ್ಟೆಗಳು ಅವು ಕೂಡ ಕಂದು ಬಣ್ಣದ್ದು...ಆ ದಿನದಿಂದ ದಿನಾಲೂ ಅವುಗಳದ್ದೊಂದು ಫೋಟೋ ತೆಗೆಡಿದುತ್ತಿದ್ದೆ..೨ ರಿಂದ ೩.೪ ಮೊಟ್ಟೆಗಳ ತನಕ ....ಇಗ ಮೊಟ್ಟೆ ಯಾವಾಗ ಒಡೆದು ಪುಟ್ಟ ಮರಿಗಳು ಹೊರ ಬರುತ್ತವೆ ಅನ್ನೋ ಕಾತರ...
ಅದಾದ ಮತ್ತೊಂದು ವಾರ ಮೊಟ್ಟೆಗಳು ಸುಮ್ಮನೆ ಗೂಡಿನಲ್ಲಿ ಮಲಗಿದ್ದವು..ಹಕ್ಕಿಗಳು ನಾವು ಬಂದ ಕೂಡಲೇ ಓಡಿ ಹೊಗ್ತಿದ್ವು...ನಾವು ಇತ್ತ ಬಂದ ಕೂಡಲೇ..ಮತ್ತೆ ಮೊಟ್ಟೆಗೆ ಕಾವಲು...
ಆದಿನ ಮೊದಲ ೨ ಮೊಟ್ಟೆ ಬಿರುಕು ಬಿಟ್ಟಿದ್ದನ್ನು ನೋಡಿ ಏನೋ ಉಲ್ಲಾಸ...ಆದ್ರೆ ಪಪ್ಪಾ ಮತ್ತು ಅಮ್ಮ ಇಬ್ಬರು ಬೈದರು'' ಮನುಷ್ಯರ ವಾಸನೆ ಬಂತು ಅಂದ್ರೆ ಅವು ಮೊಟ್ಟೆ ಮುಟ್ಟಲ್ಲ ಹತ್ತಿರ ಹೋಗಬೇಡಿ ''ಸರಿ ಆ ದಿನ ಫೋಟೋ ಇಲ್ಲ .....ಆದ್ರೆ ಮರುದಿನ ಯಾರಿಗೂ ಗೊತ್ತಿಲ್ಲದಂತೆ ಗೂಡಿನ ಹತ್ತಿರ ಹೋದರೆ ೩ ಮರಿಗಳು...
ಇನ್ನೊಂದು ದಿನ ದ ಅಂತರ ದಲ್ಲಿ ೪ ಮರಿಗಳು ಹೊರ ಬಂದವು.....ಆಹಾರಕ್ಕೆ ಬಾಯಿ ತೆರೆದರೆ ಪುಟ್ಟ ಹೂವುಗಳು ಅರಳಿದಂತೆ ಅನಿಸ್ತಿತ್ತು...
ಎಷ್ಟ್ ಬೇಗ ಅವಕ್ಕೆ ರೋಮ ಮೂದಿದವೆಂದರೆ ಮೊದಲಿನ ರೂಪ ನೆನೆಪಿಸಿ ಕೊಳ್ಳಲು ಮೊದಲಿನ ಫೋಟೋ ನೋಡಬೇಕಿತ್ತು...
ಇನ್ನೇನು ಮತ್ತೊಂದು ವಾರದಲ್ಲಿ ಅವು ಬಾನಿಗೆ ....ಈ ಅನುಭವ ನನಗೆ ಪೂರ್ಣಚಂದ್ರ ತೇಜಸ್ವಿ ಅವರ ಸುಸ್ಮಿತ ಮತ್ತು ಹಕ್ಕಿ ಮರಿ ಪಾಠ ನೆನಪಿಸ್ತಿತ್ತು..
ಎಷ್ಟು ಬೇಗ ಬೆಳೆದವು ಒಂದು ತಿಂಗಳಲ್ಲಿ .....ಅವುಗಳು ಕನಸುತ್ತಿರಬೇಕು..ನಾವು ಹಾರ್ತೀವಿ ಅಮ್ಮ ಅಪ್ಪನಿಗಿಂತ ಮೆಲ್ಸ್ತರ ದಲ್ಲಿ ....ಆದರೆ ಅಂದು ಕೊಂಡಿದ್ದೆಲ್ಲ ಆಗುತ್ತ???
ಆದಿನ ನಾ ಇರಲಿಲ್ಲ...ತಂಗಿ ಫೋನ್ ನಲ್ಲಿ ಹಕ್ಕಿ ಮರಿಗಳನ್ನು ಹಾವು ತಿಂತಿದೆ ...ನಮಗೂ ಏನು ಮಾಡೋಕೆ ಆಗ್ತಿಲ್ಲ ..ಅಪ್ಪ ಅಮ್ಮ ಹಕ್ಕಿಗಳು ಕೆಟ್ಟದಾಗಿ ಚೀರ್ತಿವೆ ಅಂದಳು ..ನಂಗೆ ಈಡಿ ದಿನ ಅದೇ ತಲೆಯಲ್ಲಿ...ಛೇ ಏನಾಯಿತು ಇದು ....
ಹಕ್ಕಿಗಿಂತ ಹಾವು ಬಲಶಾಲಿ ನಿಜ ಆದ್ರೆ ಹಾವಿಗಿಂತ ನಾವು ಮಿಗಿಲಲ್ಲವೇ??
ನಾವು ಉಳಿಸಬಹುದಿತ್ತು ಅದನ್ನ ....ಅದಕ್ಕೆ ಪಪ್ಪಾ ಹೇಳಿದ್ರು''ಜೀವ ಸಂಕುಲಕ್ಕೆ ಅವದ್ದೆ ಒಂದು ನಿಯಮ ಇದೆ...ನೀ ಇಲ್ಲಿ ಹಾವನ್ನು ಹೊಡೆದು ಹಕ್ಕಿ ಮರಿಯನ್ನ ಉಳಿಸಿದರೆ ಅಲ್ಲಿ ಹಾವಿನ ಮರಿಯು ಇರಬಹುದೇನೋ ಅಲ್ವೇ??''ಹಾವಿನ ಮರಿ ಅವುಗಳ ಜೊತೆ ಇರಲ್ಲ..ನಾನೆಂದೆ...''ಇದು ಉದಾಹರಣೆ..ಅಷ್ಟೇ..ನಿನಗೆ ಅದರೊದಿಗೆ ಭಾವನಾತ್ಮಕ ಸಂಭಂಧ ...ಹಾವಿಗೆ ತನ್ನ ಆಹಾರ..''
ಪಪ್ಪ್ ನ ತರ್ಕ ನನಗೇಕೋ ಇಷ್ಟಾ ಆಗ್ಲಿಲ್ಲ...ಬೇಜಾರು ಕೆಲದಿನಗಳಲ್ಲಿ ಕಡಿಮೆ ಆಗುತ್ತ ಬಂತು..ಮತ್ತೊಂದು ಹೊಸ ಮುಂಜಾನೆ ..''ಅಮಿತಾ ಮತ್ತೆ ಪೇರಳೆ ಮರಕ್ಕೆ ಗೂಡು.''ಅಂತ ಅಮ್ಮ ಕೂಗಿದರು..ಆದ್ರೆ ಆದಿನ ನಾನೆ ನನ್ನ ಗೂಡು ಅರಸಿಕೊಂಡು ಸಾವಿರಾರು ಮೈಲಿ ದೂರ ಹಾರಲಿದ್ದೆ...